
ಸಕಲೇಶಪು: ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರು ಬಿ. ವಿ ಜಯರಾಜ್ (ಜಯಣ್ಣ ಬ್ಯಾಕರವಳ್ಳಿ) ವೀರಶೈವ ಸಮಾಜದ ಕಣ್ಣಾಗಿ, ಸರ್ವ ಸಮಾಜದ ಎಲ್ಲರ ಪ್ರೀತ್ಯಾದರಗಳಿಗೆ ಪಾತ್ರರಾಗಿದ್ದಾರೆ. ಅವರಲ್ಲಿರುವ ಸಹೃದಯತೆ, ಮುಗುಳುನಗೆ, ಜನಮನವನ್ನು ಗೆಲ್ಲುತ್ತಿದೆ. ಬಾಗಿದ ತಲೆ ಮುಗಿದ ಕೈಯುಳ್ಳವರಾಗಿ ಹಿರಿಕಿರಿಯರೆನ್ನದೆ ಎಲ್ಲರೊಂದಿಗೂ ಹೊಂದಾಣಿಕೆಯಿಂದ ಮುನ್ನುಡೆಯುತ್ತಿರುವ ಹಿರಿಜೀವದವರು .

ಶ್ರೀಯುತರು ಆದರ್ಶ ಕುಟುಂಬದಲ್ಲಿ ಹುಟ್ಟಿ ಬೆಳೆದು ಸಮಾಜದಲ್ಲಿ ಗಟ್ಟಿಹೆಜ್ಜೆಯನ್ನು ಮೂಡಿಸಿದವರು. ಧಾರ್ಮಿಕ ಸಾಂಸ್ಕೃತಿಕ ಕ್ಷೇತ್ರದಲ್ಲಿ ಎಲ್ಲ ಜನ ಸಮುದಾಯದ ಧ್ವನಿಯಾಗಿ ಕೆಲಸ ಮಾಡಿದವರು. ಸಾಮಾಜಿಕ ಪರಿಸರದಲ್ಲಿ ನಿಷ್ಕಳಂಕ ವ್ಯಕ್ತಿತ್ವವನ್ನು ಹೊಂದಿದವರು.
ಆದರ್ಶ ಬದುಕನ್ನು ನಡೆಸಿ ಇನ್ನಿತರರಿಗೆ ಮಾದರಿಯಾಗಿ,ಇಂದೂ ಕೂಡ ಸರ್ವರ ನಾಲಿಗೆಯ ಮೇಲೆ ನಲಿದಾಡುತ್ತ ಪರಿಸರದಲ್ಲಿ ಇವರನ್ನು ಗುರುತಿಸದೆ ಇರುವ ವ್ಯಕ್ತಿಗಳಾರೂ ಇಲ್ಲ. ಎಲ್ಲ ಕ್ಷೇತ್ರಗಳಲ್ಲಿ ಅಜಾತ ಶಕ್ತಿಗಳಾಗಿ ಕಾರ್ಯ ನಡೆಸಿಕೊಂಡು ಬಂದವರು. ನಾಡಿನ ಮಠ ಮಾನ್ಯಗಳೊಂದಿಗೆ ಅವಿನಾಭಾವ ಸಂಬಂಧ. ನಡೆದಾಡಿದ ದೇವರು ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಜಿಯವರ ಮಾರ್ಗದರ್ಶನದಲ್ಲಿ ವೀರಶೈವ ಹಾಸ್ಟೆಲ್, ಕಲ್ಯಾಣ ಮಂಟಪ, ಶ್ರೀ ಮಲೆನಾಡು ವೀರಶೈವ ಸಮಾಜದ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ ಧೀಮಂತ ವ್ಯಕ್ತಿತ್ವ ಇವರದು.
ಅನೇಕ ಸಂಘ, ಸಂಸ್ಥೆಗಳಲ್ಲಿ, ಸಮಾಜ ಕಾರ್ಯಗಳಲ್ಲಿ ಅಧ್ಯಕ್ಷರು,ಕಾರ್ಯದರ್ಶಿಗಳು, ಸಲಹೆಗಾರರು, ಮಾರ್ಗದರ್ಶಿಗಳಾಗಿ ದುಡಿದವರು. “ಆಡು ಮುಟ್ಟದ
ಸೊಪ್ಪಿಲ್ಲ ಶರಣ ಜಯಣ್ಣ ನವರು ದುಡಿಯದ, ಮಾರ್ಗದರ್ಶನವೀಯದ, ಸಲಹೆ, ಸಹಕಾರ
ನೀಡದ ಸಂಘ, ಸಂಸ್ಥೆಗಳಿಲ್ಲ. ಶಿಸ್ತಿನ ಸಿಪಾಯಿ, ಲಕ್ಷಣವಾದ ಮುಖಭಾವ, ಅವರ ಮೃದು ಧ್ವನಿ ಸದಾ ನನ್ನ ಕಿವಿಯಲ್ಲಿ ಝಂಕರಿಸುತ್ತದೆ. ಎಲ್ಲರನ್ನು ಬಾಯಿತುಂಬ ಬಾ ರಾಜ, ಹೇಗಿದ್ದೀಯಾ ರಾಜಾ ಎಂದು ವಿಶ್ವಾಸದಿಂದ ಮಾತನಾಡಿಸುವ . ವೀರಶೈವ ಲಿಂಗಾಯಿತ ಸಮಾಜಕ್ಕೆ ಅವರ ಕೊಡುಗೆ ಎಂದೆಂದಿಗೂ ಮರೆಯುವಂತದ್ದಲ್ಲ. ಎಲ್ಲರ ಮನೆ ಮನದಲ್ಲಿ ಹಸಿರು ಹಸಿರು ಇವರೇ ಎಲ್ಲರ ಪ್ರೀತಿಯ ಬ್ಯಾಕರವಳ್ಳಿ ಜಯಣ್ಣ ನವರು..




