ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಬಂಟ್ವಾಳ ಇದರ ತುಂಬೆ ವಲಯದ ಪರಂಗಿಪೇಟೆ ಶ್ರೀ ಅಂಬಿಕಾ ಸ್ವ ಸಹಾಯ ಸಂಘದ ಸದಸ್ಯರಾದ ಮೀನಾಕ್ಷಿ ರವರ ಪುತ್ರ ವಾಹನ ಅಪಘಾತದಲ್ಲಿ ಮರಣ ಹೊಂದಿದ್ದು ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪೂರ್ಣ ಸುರಕ್ಷಾ ವಿಭಾಗದಿಂದ ರೂ 25,000/- ಮೊತ್ತದ ಚೆಕ್ಕನ್ನು ಸಹಾಯಧನವಾಗಿ ವಿತರಿಸಲಾಯಿತು. ಅಲ್ಲದೆ ಮೀನಾಕ್ಷಿರವರು ಸಂಘದಿಂದ 1ಲಕ್ಷ ರೂಪಾಯಿ ಸಾಲವನ್ನು ಪಡೆದಿದ್ದು, ಈ ಸಾಲಕ್ಕೆ ತನ್ನ ಮಗ ವಿನಿಯೋಗದಾರ ಆಗಿರುವುದರಿಂದ ಈ ಸಾಲಕ್ಕೆ ಪ್ರಗತಿ ರಕ್ಷಾ ಕವಚ ವಿಮೆ ಮಂಜುರಾಗಿ ಈ ಸಾಲ ಮನ್ನ ವಾಗಿರುತ್ತದೆ. ಈ ಸಂದರ್ಭ ಪರಂಗಿಪೇಟೆ ಒಕ್ಕೂಟದ ಅಧ್ಯಕ್ಷರಾದ ಸುಕೇಶ್ ಶೆಟ್ಟಿ, ತುಂಬೆ ವಲಯ ಮೇಲ್ವಿಚಾರಕಿ ಮಮತಾ, ಪರಂಗಿಪೇಟೆ ಒಕ್ಕೂಟದ ಸೇವಾ ಪ್ರತಿನಿಧಿ ಅಮಿತಾ, ಒಕ್ಕೂಟದ ಪದಾಧಿಕಾರಿಗಳಾದ ಸುಕನ್ಯಾ ,ಪವಿತ್ರ, ಚಂದ್ರಕಲಾ, ಹಾಗೂ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.