ನನ್ನನ್ನು ಸ್ವಾಗತಿಸಲು ಬರುವುದು ಬೇಡ ಎಂದು ನಾನು ಸಿಎಂಗೆ ಮನವಿ ಮಾಡಿದ್ದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನಾನು ವಿಜ್ಞಾನಿಗಳನ್ನು ನೋಡಲು ಬೆಂಗಳೂರಿಗೆ ಬಂದಿದ್ದೇನೆ. ಬೆಳಗ್ಗೆಯಾಗಿದ್ದರಿಂದ ನನಗೆ ಸ್ವಾಗತಿಸುವ ಅಗತ್ಯವಿಲ್ಲ ಎಂದು ಸಿಎಂ, ಡಿಸಿಎಂಗೆ ಮನವಿ ಮಾಡಿದ್ದೇ ಅಂತ ನಮೋ ತಿಳಿಸಿದ್ದಾರೆ. ಇಸ್ರೋ ವಿಜ್ಞಾನಿಗಳನ್ನು ನೋಡಲು, ಅವರನ್ನು ಅಭಿನಂದಿಸಲು ನಾನು ಕಾತರದಿಂದ ಕಾಯುತ್ತಿದ್ದೇನೆ ಎಂದು ಎಚ್‌ಎಎಲ್ ಏರ್‌ಪೋರ್ಟ್‌ನಲ್ಲಿ ಮೋದಿ ಹೇಳಿದರು.