ಸಿಎಂ ಮೊಮ್ಮಗನಿಗಾಗಿ ವಿಧಾನಸೌಧದ ಮುಂದೆ ಸಂಭ್ರಮ ಮಾಡಿದರಾ..?: ಪ್ರತಾಪ್ ಸಿಂಹ

Share with

ಮೈಸೂರು: ರಾಜ್ಯ ಸರ್ಕಾರದ ಬೇಜವಾಬ್ದಾರಿತನದಿಂದ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ಶೋಕಾಚರಣೆ ಆಗಿದ್ದು, ಈ ಘಟನೆಗೆ ನೇರವಾಗಿ ಕಾಂಗ್ರೆಸ್‌ ಸರ್ಕಾರವೇ ಕಾರಣ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಸಿಎಂ ಹಾಗೂ ಡಿಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಒರಟು ವ್ಯಕ್ತಿ ಎಂದುಕೊಂಡಿದ್ದೆ, ಆದರೆ ನೀವು ಸಂವೇದನೆ ಇಲ್ಲದ ನಿರ್ಭಾವುಕ ಮನುಷ್ಯ ಎಂಬುದು ಈ ಘಟನೆಯಿಂದ ಗೊತ್ತಾಗಿದೆ. ಜಮೀರ್ ಮಗ, ರಿಜ್ವಾನ್ ಮಗ, ಮುಖ್ಯ ಕಾರ್ಯದರ್ಶಿ ಮಗಳು, ಸಿಎಂ ಮೊಮ್ಮಗನಿಗಾಗಿ ವಿಧಾನಸೌಧದದ ಮುಂದೆ ಕಾರ್ಯಕ್ರಮ ಮಾಡಿದರಾ? ಎಂದು ಟೀಕಿಸಿದರು.


Share with

Leave a Reply

Your email address will not be published. Required fields are marked *