ಗ್ರಾಮಭಿವೃದ್ಧಿ ಯೋಜನೆಯ ತುಂಬೆ ವಲಯದ ಮಾಜಿ ಅಧ್ಯಕ್ಷರು ಹಾಗೂ ಬಂಟ್ವಾಳ ತಾಲೂಕಿನ ಕೇಂದ್ರ ಒಕ್ಕೂಟದ ಮಾಜಿ ಅಧ್ಯಕ್ಷರಾದ ಶ್ರೀ ಮಾಧವ ವಲವೂರು ರವರು ಪ್ರಸ್ತುತ ಪಾಶ್ವ ವಾಯು ಕಾಯಿಲೆಯಿಂದ ಅನಾರೋಗ್ಯದಲ್ಲಿದ್ದು ಇವರಿಗೆ ಚಿಕಿತ್ಸಾ ವೆಚ್ಚಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಹಾಯಧನ ರೂಪಾಯಿ 20,000 ಹಾಗೂ ತುಂಬೆ ಕಾರ್ಯಕ್ಷೇತ್ರದ ಸರಸ್ವತಿ ಸಂಘದ ಸದಸ್ಯಯಾದ ಸುಕನ್ಯಾ ರವರಿಗೆ ತನ್ನ ನರ ದೌರ್ಬಲ್ಯದಿಂದ ಪಾಶ್ವವಾಯು ಚಿಕಿತ್ಸೆ ವೆಚ್ಚಕ್ಕಾಗಿ ಸಹಾಯಧನ ರೂಪಾಯಿ 25,000 ಮೊತ್ತವನ್ನು ಯೋಜನೆಯ ಬಂಟ್ವಾಳ ತಾಲೂಕಿನ ಯೋಜನಾಧಿಕಾರಿಯವರಾದ ಮಾಧವ ಗೌಡ ವಿತರಿಸಿದರು.
ಈ ಸಂದರ್ಭ ತುಂಬೆ ವಲಯ ಮೇಲ್ವಿಚಾರಕಿ ಮಮತಾ ಒಕ್ಕೂಟದ ಉಪಾಧ್ಯಕ್ಷರಾದ ವಸಂತಿ, ಸದಸ್ಯರುಗಳಾದ ಸುಶೀಲ, ರೋಹಿನಿ, ಹಾಗೂ ತುಂಬೆ ವಲಯದ ತುಂಬೆ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಅನಿತಾರವರು ಉಪಸ್ಥಿತರಿದ್ದರು.