ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಲೆತ್ತೂರು ವಲಯದ ಸಜಿಪ ಮೂಡ ಗ್ರಾಮದ ಶ್ರೀನಿಲ್ಯ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಕ್ಷೇತ್ರದಿಂದ ರೂ.1 ಲಕ್ಷ ಸಹಾಯಧನ ಮಂಜೂರಾಗಿದ್ದು ಸಹಾಯಧನ ಡಿ.ಡಿ ಯನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸಜೀಪ ಮೂಡ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ರಮೇಶ್ ನಾಯ್ಕ ಕೋಮಾಲಿ, ಒಕ್ಕೂಟದ ಪದಾಧಿಕಾರಿಗಳಾದ ಉಮಾವತಿ, ಶ್ರೀ ನೀಲ್ಯ ದೈವಸ್ಥಾನದ ಟ್ರಸ್ಟ್ ನ ಅಧ್ಯಕ್ಷರಾದ ಜಯಂತ್ ಸಾಲಿಯಾನ್, ಕೋಶಾಧಿಕಾರಿ ಸುರೇಶ್ ಪೂಜಾರಿ, ಸಮಿತಿಯ ಸದಸ್ಯರಾದ ಸುನಿಲ್ ಕುಮಾರ್, ಜಾರಪ್ಪ ಪೂಜಾರಿ, ಗೋಪಾಲ, ಯೋಜನೆಯ ವಿಟ್ಲ ತಾಲ್ಲೂಕು ಕೃಷಿ ಅಧಿಕಾರಿ ಚಿದಾನಂದ, ಸಾಲೆತ್ತೂರು ವಲಯ ಮೇಲ್ವಿಚಾರಕಿ ಮೋಹಿನಿ, ಸೇವಾ ಪ್ರತಿನಿಧಿ ಪ್ರಮೀಳಾ ಮೊದಲಾದವರು ಉಪಸ್ಥಿತರಿದ್ದರು.