ಉಪ್ಪಳ: ಪ್ರತಾಪನಗರ ಗ್ರಾಮದ ಮನೆಗಳಿಗೆ ಅಯೋಧ್ಯೆಯ ಮಂತ್ರಾಕ್ಷತೆ ವಿತರಣೆ ಆರಂಭ

Share with

ಉಪ್ಪಳ: ಅಯೋಧ್ಯೆಯಲ್ಲಿ ಜನವರಿ 22ರಂದು ಶ್ರೀರಾಮ ದೇವರ ಪ್ರಾಣ ಪ್ರತಿಷ್ಟೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಪೂಜಿಸಿ ತಂದಂತಹ ಮಂತ್ರಾಕ್ಷತೆಯನ್ನು ಪ್ರತಾಪನಗರ ಶ್ರೀ ಗೌರೀ ಗಣೇಶ ಮಂದಿರದಿಂದ ಗ್ರಾಮದ ಮನೆಗಳಿಗೆ ತಲುಪಿಸುವ ಕಾರ್ಯಕ್ಕೆ ಪ್ರಗತಿಪರ ಕೃಷಿಕರಾದ ಎಂ.ಕೆ ಅಶೋಕ್ ಕುಮಾರ್ ಹೊಳ್ಳ ಚಾಲನೆ ನೀಡಿದರು.

ಅಯೋಧ್ಯೆಯ ಮಂತ್ರಾಕ್ಷತೆ ವಿತರಣೆ ಆರಂಭ

ಈ ವೇಳೆ ಪುರುಶೋತ್ತಮ ಪ್ರತಾಪನಗರ, ವಾರ್ಡ್ ಸದಸ್ಯೆ ಸುಧಾ ಗಣೇಶ್, ಹಿರಿಯರಾದ ಶಿವಾನಂದ ಆಚಾರ್ಯ, ಕೆ.ಪಿ ಅಶೋಕ್ ಹಾಗೂ ಮಂದಿರದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *