ಡಿವೋರ್ಸ್ ವದಂತಿಗಳನ್ನು ಲೆಕ್ಕಿಸದೆ, ಪರಸ್ಪರ ನಂಬಿಕೆಯೇ ಇಷ್ಟು ವರ್ಷಗಳ ಕಾಲ ನಮ್ಮನ್ನು ಒಟ್ಟಿಗೆ ಇರಿಸಿದೆ ಎಂದು ಅಭಿಷೇಕ್ ಬಚ್ಚನ್ ಸಂದರ್ಶನವೊಂದರಲ್ಲಿ ಸ್ಪಷ್ಟಪಡಿಸಿದ್ದಾರೆ.

ಐಶ್ವರ್ಯಾ ರೈ ಜೊತೆಗಿನ 18 ವರ್ಷಗಳ ವೈವಾಹಿಕ ಬಂಧದ ಹಿಂದಿನ ರಹಸ್ಯವನ್ನು ಅವರು ಹಂಚಿಕೊಂಡಿದ್ದಾರೆ. ನಮ್ಮ ವೈವಾಹಿಕ ಜೀವನ ಸುಗಮವಾಗಿ ಸಾಗಲು ‘ಸೀರಿಯಸ್ ಇಗೋ’ ಕಾರಣ ಅನಿಸುತ್ತದೆ. ಇಲ್ಲಿ ‘ಇಗೋ’ ಅಂದ್ರೆ ಗರ್ವವಲ್ಲ, ಬದಲಾಗಿ ಸಂಬಂಧವನ್ನು ಕಾಪಾಡಿಕೊಳ್ಳುವ ದೃಢತೆ, ಆತ್ಮಗೌರವ ಎಂದು ಅಭಿಷೇಕ್ ವಿವರಿಸಿದರು.




