ಸಿದ್ದರಾಮಯ್ಯ 5 ವರ್ಷ ನಾನೇ CM ಎಂದಿದ್ದಾರೆ ಅಂದಮೇಲೆ ಕಾಂಗ್ರೆಸ್‌ನಲ್ಲಿ ಡಿಕೆಶಿಗೆ ನಯಾಪೈಸೆ ಬೆಲೆ ಇಲ್ಲ ಎಂದು R.ಅಶೋಕ್ ವ್ಯಂಗ್ಯವಾಡಿದ್ದಾರೆ. ‘ಸಿದ್ದರಾಮಯ್ಯ ಸಾವಿರ ಬಾರಿ ನಾನೇ 5 ವರ್ಷ CM ಎಂದು ಹೇಳುತ್ತಿದ್ದಾರೆ.

ಇದೇ ಅವರ ದೌರ್ಬಲ್ಯ. DK ಶಿವಕುಮಾರ್ ಸರ್ಕಾರವನ್ನು ನಾನೇ ಅಧಿಕಾರಕ್ಕೆ ತಂದೆ ಎಂದಿದ್ದಾರೆ. ಇನ್ನೂ ಸ್ವಾಮೀಜಿ ಸಹ ಡಿಕೆಶಿ CM ಆಗಲಿ ಎಂದು ಹೇಳಿದ್ದಾರೆ. ಆದರೆ ಸಿದ್ದರಾಮಯ್ಯ 5 ವರ್ಷ ನಾನೇ ಸಿಎಂ ಎಂದಿದ್ದು, ಡಿಕೆಶಿಗೆ ನಯಾ ಪೈಸೆ ಬೆಲೆ ಇಲ್ಲ ಎಂದರ್ಥ’ ಎಂದಿದ್ದಾರೆ.