ರಾಜ್ಯದಲ್ಲಿ ಅಧಿಕಾರ ಹಸ್ತಾಂತರ ಮತ್ತೆ ಚರ್ಚೆಗೆ ಬಂದಿದೆ. KPCC ಅಧ್ಯಕ್ಷರಾಗಿ ಹೊಸಬರನ್ನು ನೇಮಕ ಮಾಡಬೇಕೆಂದು ಸಚಿವ ಸತೀಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಜೊತೆ ನಡೆಸಿದ ಮಾತುಕತೆ ವೇಳೆ ಅವರು ಈ ಬೇಡಿಕೆ ಮಂಡಿಸಿದ್ದಾರೆ. ಸಿಎಂ ಆಪ್ತ ಬಣದಲ್ಲಿ ಸತೀಶ್ ಜಾರಕಿಹೊಳಿ ಗುರುತಿಸಿಕೊಂಡಿದ್ದಾರೆ. ಡಿಕೆಶಿ ತಂತ್ರಕ್ಕೆ ಸಿಎಂ ಸಿದ್ದರಾಮಯ್ಯ ತಮ್ಮ ಆಪ್ತರ ಮೂಲಕ ಪ್ರತಿತಂತ್ರ ಹೆಣೆಯುತ್ತಿದ್ದು, KPCC ಅಧ್ಯಕ್ಷ ಪಟ್ಟ ಸಮರ ತೀವ್ರ ಸ್ವರೂಪ ಪಡೆಯಲಿದೆ.




