ಕೆಟ್ಟ ಕೊಲೆಸ್ಟ್ರಾಲ್ ನಿಂದ ಹೃದಯವನ್ನು ರಕ್ಷಿಸಿಕೊಳ್ಳಲು ಈ ರೀತಿ ಮಾಡಿ; ಹೃದಯಾಘಾತ, ಪಾರ್ಶ್ವವಾಯುವಿನಿಂದ ದೂರವಿರಿ

Share with

ಡಿಸ್ಲಿಪಿಡೆಮಿಯಾ (Dyslipidemia) ಬಗ್ಗೆ ನಿಮಗೆ ತಿಳಿದಿರಬಹುದು. ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಅಸಹಜವಾಗಿ ಬದಲಾದಾಗ, ಅದನ್ನು ಡಿಸ್ಲಿಪಿಡೆಮಿಯಾ ಎಂದು ಕರೆಯಲಾಗುತ್ತದೆ. ಇದು ದೇಹಕ್ಕೆ ಹಾನಿಕಾರಕವಾದ ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್‌ನ ಹೆಚ್ಚಳ, ಉತ್ತಮ ಕೊಲೆಸ್ಟ್ರಾಲ್ (Cholesterol) ಎಂದು ಕರೆಯಲ್ಪಡುವ ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್‌ನ ಇಳಿಕೆ ಮತ್ತು ಟ್ರೈಗ್ಲಿಸರೈಡ್‌ಗಳ ಹೆಚ್ಚಳವನ್ನು ಒಳಗೊಂಡಿರುತ್ತದೆ. ಇವು ಹೃದಯ ಸಮಸ್ಯೆಗಳು, ಹೃದಯಾಘಾತ (Heart attack) ಮತ್ತು ಪಾರ್ಶ್ವವಾಯುಗಳಂತಹ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಮಾತ್ರವಲ್ಲ ಕೆಲವು ಬಾರಿ ಜೀವಕ್ಕೂ ಅಪಾಯಕಾರಿಯಾಗಬಹುದು. ಆದ್ದರಿಂದ ಈ ರೀತಿಯ ಪರಿಸ್ಥಿತಿಗಳಿಂದ ದೂರವಿರಲು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವುದು ಬಹಳ ಮುಖ್ಯವಾಗುತ್ತದೆ. ಅದಕ್ಕೆ ನಮ್ಮ ಜೀವನಶೈಲಿ ಸರಿಯಾಗಿರಬೇಕಾಗುತ್ತದೆ. ಹಾಗಾದರೆ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು? ಯಾವ ರೀತಿಯ ಆಹಾರ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ಸಾಮಾನ್ಯವಾಗಿ, ಡಿಸ್ಲಿಪಿಡೆಮಿಯಾದಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾಗಿ, ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ, ಇದರ ಪರಿಣಾಮವಾಗಿ ಹೃದಯ ಸಮಸ್ಯೆಗಳು ಮತ್ತು ಪಾರ್ಶ್ವವಾಯು ಉಂಟಾಗುತ್ತದೆ. ಮೆದುಳಿಗೆ ಸರಿಯಾದ ಆಮ್ಲಜನಕ ಪೂರೈಕೆ ಸಿಗದಿದ್ದಾಗ ದೈಹಿಕ ಅಂಗವೈಕಲ್ಯದಿಂದ ಹಿಡಿದು ಸಾವಿನವರೆಗೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಇದನ್ನು ತಡೆಗಟ್ಟಲು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಸಮಸ್ಯೆ ಹೆಚ್ಚಾದಾಗ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ;

  • ಎದೆ ನೋವು
  • ಉಸಿರಾಟದ ತೊಂದರೆ
  • ಆಯಾಸ, ಸುಸ್ತು
  • ಅಧಿಕ ರಕ್ತದೊತ್ತಡ
  • ಹೃದಯ ಬಡಿತದಲ್ಲಿ ಏರಿಳಿತ
  • ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ

Share with

Leave a Reply

Your email address will not be published. Required fields are marked *