ಊಟದ ಮಧ್ಯೆ ನೀರು ಕುಡಿಯುವುದು ಸೂಕ್ತವಲ್ಲ ಎನ್ನುತ್ತಾರೆ ತಜ್ಞರು. ಆಹಾರ ಜೀರ್ಣವಾಗಲು ಜೀರ್ಣಾಂಗವ್ಯೂಹದಲ್ಲಿ ಹೈಡೋಕ್ಲೋರಿಕ್ ಆಮ್ಲ ಬಿಡುಗಡೆಯಾಗುತ್ತದೆ. ಇದು, ಆಹಾರದ ಮೂಲಕ ಪ್ರವೇಶಿಸುವ ರೋಗಾಣುಗಳನ್ನು ತಡೆದು, ಜೀರ್ಣಕ್ರಿಯೆ ಸರಾಗವಾಗಿಸುತ್ತದೆ.

ಊಟದ ಮಧ್ಯೆ ನೀರು ಕುಡಿದರೆ ಇದರ ಸಾಂದ್ರತೆ ಕಡಿಮೆಯಾಗಿ ಜೀರ್ಣಕ್ರಿಯೆ ದುರ್ಬಲವಾಗುತ್ತದೆ. ಇದರಿಂದ ಹೊಟ್ಟೆಹುಣ್ಣು, ಅಸ್ವಸ್ಥತೆ, ಅಜೀರ್ಣ ಇತ್ಯಾದಿ ಸಮಸ್ಯೆ ಉಂಟಾಗಬಹುದು. ಊಟವಾದ ಸ್ವಲ್ಪ ಸಮಯದ ಬಳಿಕ ನೀರು ಕುಡಿಯುವುದು ಉತ್ತಮ.




