ಊಟ ಮಾಡಿಯಾದ ತಕ್ಷಣ ಕೆಲಸ ಮಾಡಲು ಕುಳಿತುಕೊಳ್ಳಬೇಡಿ. ಇದರಿಂದ ದೇಹಕ್ಕೆ ಆಲಸ್ಯ ಮತ್ತಷ್ಟು ಹೆಚ್ಚಾಗುತ್ತದೆ. ಊಟ ಮಾಡಿದ ತಕ್ಷಣ ಸ್ವಲ್ಪ ಹೊತ್ತು ನಡೆಯಿರಿ. ಇದು ಊಟವಾದ ಕೂಡಲೇ ನಿದ್ದೆ ಬರುವುದನ್ನು ತಪ್ಪಿಸುತ್ತದೆ. ದಿನವಿಡೀ ಹೆಚ್ಚು ನೀರು ಕುಡಿಯುವುದರಿಂದಲೂ ಊಟ ಆದ ಕೂಡಲೇ ನಿದ್ದೆ ಬರುವುದನ್ನು ತಡೆಯಬಹುದು.

ಸಕ್ಕರೆ ಮತ್ತು ಕೊಬ್ಬಿನ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಸೇವಿಸಬೇಡಿ. ಊಟದ ನಂತರ ಸ್ವೀಟ್ ಹಾಗೂ ಸಿಹಿಯಾದ ಹಣ್ಣುಗಳನ್ನು ತಿನ್ನುವ ಅಭ್ಯಾಸ ಬಿಟ್ಟು ಬಿಡಿ.




