ನಿಮ್ಮಲ್ಲಿ 5 ರೂಪಾಯಿ ಹಳೆ ನೋಟು ಇದೆಯೇ..? ಹಾಗಿದ್ರೆ ನೀವು ಲಕ್ಷಾಧಿಪತಿ..!! ಹೇಗೆ ಅಂತೀರಾ.. ಈ ಸ್ಟೋರಿ ಓದಿ

Share with

ಅನೇಕ ಜನರು ಹಳೆಯ ನೋಟುಗಳು ಉಪಯೋಗಕ್ಕೆ ಬರುವುದಿಲ್ಲವೆಂದು ಮನೆಯ ಮೂಲೆಯಲ್ಲಿ ಇಟ್ಟಿರುತ್ತಾರೆ. ಕೆಲವರು ಅವುಗಳನ್ನು ಬ್ಯಾಂಕುಗಳಲ್ಲಿ ವಿನಿಮಯ ಮಾಡಿಕೊಳ್ಳುತ್ತಾರೆ. ಆ ಹಳೆಯ ನೋಟುಗಳು ನಿಜವಾಗಿಯೂ ನಿಮಗೆ ಅದೃಷ್ಟವನ್ನು ತರುತ್ತವೆ ಅಂದ್ರೆ ನೀವು ನಂಬುತ್ತೀರಾ? ಹೌದು, ಕೆಲವು ವರ್ಷಗಳ ಹಿಂದೆ ಮುದ್ರಿಸಲಾದ ಈ ಹಳೆಯ ಐದು ರೂಪಾಯಿ ನೋಟು ಇಂದು ಅನೇಕ ಜನರಿಗೆ ಅದೃಷ್ಟವನ್ನು ತಂದಿದೆ. ಈ ಹಳೆಯ ನೋಟುಗಳು ನಿಮಗೆ ಲಕ್ಷಾಂತರ ರೂಪಾಯಿ ಲಾಭ ತಂದುಕೊಡಬಹುದು.

ನೋಟುಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿರುವ ವಿದೇಶಿಗರು (ನಾಣ್ಯಶಾಸ್ತ್ರಜ್ಞರು) ಇಂತಹ ಹಳೆಯ 5 ರೂ. ಮುಖಬೆಲೆಯ ನೋಟುಗಳನ್ನು ಖರೀದಿಸಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಅಪರೂಪದ ನೋಟುಗಳಿಗೆ ಅವರು ದೊಡ್ಡಮೊತ್ತದ ಹಣ ನೀಡಲು ಸಹ ಸಿದ್ಧರಿರುತ್ತಾರೆ. ವಿಶೇಷವಾಗಿ 5 ರೂಪಾಯಿ ನೋಟಿನ ಮೇಲೆ ಕೆಲವು ಅಪರೂಪದ ಮುದ್ರೆಗಳಿದ್ದರೆ ಅದರ ಬೆಲೆ ಹೆಚ್ಚು ಇರುತ್ತದೆ. ಕೆಲವು ಲಕ್ಷಾಂತರ ರೂಪಾಯಿ ಬೆಲೆ ಬಾಳುತ್ತವೆ. 

ಖರೀದಿದಾರರು ಈ ವಿಶೇಷ ನೋಟುಗಳಿಗೆ ಭಾರೀ ಮೊತ್ತವನ್ನು ಪಾವತಿಸುತ್ತಾರೆ. ಈ ಅಪರೂಪದ ನೋಟುಗಳ ಮೇಲೆ ಕೆಲವು ಸಂಖ್ಯೆಗಳಿದ್ದರೆ ಅವುಗಳಿಗೆ ಬೆಲೆ ಜಾಸ್ತಿ ಇರುತ್ತದೆ. ವಿಶೇಷವಾಗಿ ನಿಯಮಿತ ಸರಣಿ ಸಂಖ್ಯೆಗಳ ಬದಲಿಗೆ, 786ನಂತಹ ವಿಶೇಷ ಸಂಖ್ಯೆ ಅಥವಾ 123456 ನಂತಹ ಅಂಕೆಗಳ ಅನುಕ್ರಮವನ್ನು ಹೊಂದಿರುವ ನೋಟುಗಳನ್ನು ಲಕ್ಷಾಂತರ ರೂಪಾಯಿ ನೀಡಿ ಖರೀದಿಸಲಾಗುತ್ತದೆ. ಈ ರೀತಿಯ ಸಂಖ್ಯೆಗಳನ್ನು ಹೊಂದಿರುವ ನೋಟುಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. 

ಈ ನೋಟುಗಳನ್ನು A ಸರಣಿಯಲ್ಲಿ ಮುದ್ರಿಸಿದ್ದರೆ, ಬೇಡಿಕೆ ಇನ್ನೂ ಹೆಚ್ಚಿರುತ್ತಿತ್ತು ಎಂದು ವರದಿಯಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ಹಿಂದೆ ಇದೇ ರೀತಿಯ ಸರಣಿ ಸಂಖ್ಯೆಗಳನ್ನು ಹೊಂದಿರುವ ಕೆಲವು 5 ರೂಪಾಯಿ ನೋಟುಗಳನ್ನು ಮಾತ್ರ ಮುದ್ರಿಸಿತ್ತು. ಪ್ರಸ್ತುತ ಇವುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇತರ ದೇಶಗಳಲ್ಲಿ ಲಕ್ಷ ಲಕ್ಷಗಳಿಗೆ ಇಂತಹ ನೋಟುಗಳನ್ನು ಖರೀದಿಸಲಾಗುತ್ತದೆ. 

5 ರೂ. ನೋಟು ಹೆಚ್ಚಿನ ದರ ಪಡೆಯಬೇಕಾದರೆ, ಅದರ ಮೇಲೆ ಕೆಲವು ವಿಶೇಷ ಚಿತ್ರಗಳು ಇರಬೇಕು. ನಿರ್ದಿಷ್ಟವಾಗಿ ಹೇಳುವುದಾದರೆ, ಹಿಂಭಾಗದಲ್ಲಿ ಟ್ರ್ಯಾಕ್ಟರ್ ಓಡಿಸುವ ರೈತನ ಚಿತ್ರವಿರಬೇಕು. ಆಗ ಮಾತ್ರ ಅದನ್ನು ಅಪರೂಪದ ನೋಟು ಎಂದು ಪರಿಗಣಿಸಲಾಗುತ್ತದೆ ಮತ್ತು ಅದನ್ನು ಖರೀದಿಸುವ ಅನೇಕರು ಆಸಕ್ತಿ ತೋರುತ್ತಾರೆ.  

ಹಳೆಯ ನೋಟುಗಳನ್ನು ಮಾರಾಟ ಮಾಡಲು ಪ್ರಸ್ತುತ ಹಲವು ರೀತಿಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಲಭ್ಯವಿದೆ. eBay ಮತ್ತು CoinBazzar ಇದರಲ್ಲಿ ಸಕ್ರಿಯ ಪಾತ್ರ ವಹಿಸುತ್ತಿವೆ. ನಿಮ್ಮಲ್ಲಿರುವ ಅಪರೂಪದ ಹಳೆಯ ನೋಟನ್ನು ನೀವು ಈ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡಿದರೆ, ಖರೀದಿದಾರರು ನಿಮಗೆ ಕರೆ ಮಾಡುತ್ತಾರೆ. ನೀವು ನೇರವಾಗಿ ಬೆಲೆಯ ಮಾತುಕತೆ ಮಾಡಿ ನೋಟನ್ನು ಮಾರಾಟ ಮಾಡಬಹುದು. 

ಹಿಂದೆ, ಅಪರೂಪದ 5 ರೂ. ನೋಟುಗಳನ್ನು ಲಕ್ಷಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಅಂತಹ ಹಳೆಯ ನೋಟುಗಳನ್ನು ಮಾರಾಟ ಮಾಡುವ ಮೂಲಕ ಅನೇಕರು 50 ಲಕ್ಷ ರೂ.ಗಳಿಗಿಂತ ಹೆಚ್ಚು ಗಳಿಸಿದ ನಿದರ್ಶನಗಳಿವೆ. ನಿಮ್ಮ ಬಳಿಯೂ ಅಂತಹ ಹಳೆಯ ನೋಟುಗಳಿದ್ದರೆ, ಅವುಗಳನ್ನು ಎಲ್ಲಿಯೋ ಎಸೆಯದೆ, ಈ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾರಾಟ ಮಾಡಿ ಹಣ ಗಳಿಸಬಹುದು. ಇಲ್ಲಿ ಮಾರಾಟ ಮಾಡಬೇಕಾದರೆ ನೀವು ತುಂಬಾ ಎಚ್ಚರಿಕೆ ವಹಿಸಬೇಕು. ಯಾವುದೇ ರೀತಿಯ ಆಮೀಷ ಮತ್ತು ವಂಚನೆಗೆ ಬಲಿಯಾಗದೆ ನೀವು ಈ ನೋಟುಗಳನ್ನು ಮಾರಾಟ ಮಾಡಬೇಕು.


Share with

Leave a Reply

Your email address will not be published. Required fields are marked *