ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಸೋರೆಕಾಯಿ ಸೇವಿಸಿ. ಯಾಕೆಂದರೆ ಅತಿ ಹೆಚ್ಚು ಔಷಧೀಯ ಗುಣಗಳನ್ನು ಹೊಂದಿರುವ ಸೋರೆಕಾಯಿ ಅಧಿಕ ಬಿಪಿ ಜೊತೆಗೆ ಮಧುಮೇಹ, ಕೊಲೆಸ್ಟ್ರಾಲ್, ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಅಲ್ಲದೇ, ಹೃದಯ, ಯಕೃತ್ತುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಪ್ರೊಟೀನ್, ವಿಟಮಿನ್ ಎ, ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನಿಸಿಯಮ್, ಸತು ಮುಂತಾದ ಪೋಷಕಾಂಶಗಳು ಸೋರೆಕಾಯಿಯಲ್ಲಿ ಹೇರಳವಾಗಿರುತ್ತದೆ.




