ಜಾಂಬೂ ಹಣ್ಣಿನಲ್ಲಿರುವ ಔಷಧೀಯ ಗುಣಗಳ ಬಗ್ಗೆ ಗೊತ್ತೆ?

Share with

ಜಾಂಬೂ ಬಹುತೇಕ ಕಾಯಿಲೆಯನ್ನು ಗುಣಪಡಿಸುವ ಶಕ್ತಿ ಈ ಹಣ್ಣಿನಲ್ಲಿದೆ. ಇದು ಹೃದಯ ಸಂಬಂಧಿ ಸಮಸ್ಯೆ ಇರುವವರಿಗೆ, ಲಿವರ್‌ ಸಮಸ್ಯೆ ಇರುವವರಿಗೆ ತುಂಬಾನೇ ಒಳ್ಳೆಯದು.ಜಾಂಬೂ, ವಾಟರ್‌ ಆ್ಯಪಲ್‌, ರೋಸ್‌ ಆ್ಯಪಲ್ ಹೀಗೆ ನಾನಾ ಹೆಸರಿನಿಂದ ಕರೆಯಲ್ಪಡುವ ಈ ಹಣ್ಣಿನ ಪರಿಚಯ ನಿಮಗಿದೆಯೇ? ಕೊಡಗು, ದಕ್ಷಿಣ ಕನ್ನಡ, ಮಲ್ನಾಡು, ಚಿಕ್ಕಮಗಳೂರು ಹೀಗೆ ಕರ್ನಾಟಕದ ಬಹುತೇಕ ಸ್ಥಳಗಳಲ್ಲಿ ಈ ಹಣ್ಣು ಕಾಣಸಿಗುವುದು.

ಕನ್ನಡದಲ್ಲಿ ಜಾಂಬೂ, ಮಲಯಾಳಂನಲ್ಲಿ ಚಾಂಬಕಾ, ತಮಿಳಿನಲ್ಲಿ ಪನ್ನೀರ್ ನಾವಲ್ ಅಥವಾ ಜಾಂಬೂ ಹೀಗೆ ಅನೇಕ ಹೆಸರಿನಿಂದ ಕರೆಯಲ್ಪಡುವ ಈ ಹಣ್ಣು ಅನೇಕ ಕಾಯಿಲೆಗಳನ್ನು ಗುಣ ಪಡಿಸಲು ಬಳಸಲಾಗುವುದು.

ಇದು ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಕಂಡು ಬಂದರೆ ಕೆಲವೊಂದು ಮರಗಳಲ್ಲಿ ಮಳೆಗಾಲದಲ್ಲಿ, ಚಳಿಗಾಲದಲ್ಲೂ ಕಂಡು ಬರುವುದು. ಆದ್ದರಿಂದ ಇದನ್ನು ಇದೇ ಕಾಲದಲ್ಲಿ ಬೆಳೆಯುತ್ತದೆ ಎಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ, ಬಹುತೇಕ ಕಾಯಿಲೆಯನ್ನು ಗುಣಪಡಿಸುವ ಶಕ್ತಿ ಈ ಹಣ್ಣಿನಲ್ಲಿದೆ ಗೊತ್ತಾ? ಇದು ಹೃದಯ ಸಂಬಂಧಿ ಸಮಸ್ಯೆ ಇರುವವರಿಗೆ, ಲಿವರ್‌ ಸಮಸ್ಯೆ ಇರುವವರಿಗೆ ತುಂಬಾನೇ ಒಳ್ಳೆಯದು. ಇದನ್ನು ಭಾರತದ ಸಾಂಪ್ರದಾಯಿಕ ಔಷಧಗಳಾದ ಯುರ್ವೇದ, ಸಿದ್ಧ ಮತ್ತು ಯುನಾನಿಯಲ್ಲಿ ಕೂಡ ಬಳಸಲಾಗುವುದು. ಈ ಹಣ್ಣಿಗೆ ಮಾವಿನ ಹಣ್ಣಿನಂತೆ ತುಂಬಾ ಪರಿಮಳವೇನೂ ಇರಲ್ಲ, ಅಲ್ಲದೆ ತಿನ್ನುವಾಗ ಹುಳಿ ಮಿಶ್ರಿತ ಸಿಹಿ ಇರುತ್ತದೆ. ಇದು ಜೀರ್ಣಕ್ರಿಯೆಗೆ ಒಳ್ಳೆಯದು, ಕೊಲೆಸ್ಟ್ರಾಲ್ ಇರಲ್ಲ, ಇದರಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತೆ, ವಿಟಮಿನ್‌ ಎ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು, ನಾರಿನಂಶ ಇರುವುದರಿಂದ ಜೀರ್ಣಕ್ರಿಯೆಗೂ ತುಂಬಾನೇ ಒಳ್ಳೆಯದು.


Share with

Leave a Reply

Your email address will not be published. Required fields are marked *