ಪ್ರತಿದಿನ ಸೇಬು ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ?

Share with

ದಿನಕ್ಕೆ ಒಂದು ಸೇಬು ತಿನ್ನಿ, ವೈದ್ಯರಿಂದ ದೂರ ಇರಿ’ ಎಂಬ ಇಂಗ್ಲೀಷ್ ಗಾದೆ ಮಾತನ್ನು ನಾವು-ನೀವೆಲ್ಲಾ ಕೇಳಿರುತ್ತೀವಿ. ಇದು ನಿಜವಾದರೂ ಇದನ್ನು ಪಾಲಿಸಿಕೊಂಡು ಹೋಗುವವರು ತುಂಬಾ ವಿರಳ. ಸೇಬಿನಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇದ್ದು, ಅವು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಮತ್ತು ಇದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

ಸೇಬು ಹಣ್ಣಿನಲ್ಲಿ ಹೆಚ್ಚು ಆಂಟಿಆಕ್ಸಿಡೆಂಟುಗಳು ಇದ್ದು, ಇದು ನಿಮ್ಮ ಚರ್ಮಕ್ಕೆ ಕಾಂತಿಯುತ ಹೊಳಪನ್ನು ನೀಡಲು ಸಹಾಯ ಮಾಡುತ್ತದೆ. ಅಲ್ಲದೇ ಸ್ತನ ಕ್ಯಾನ್ಸರ್, ಬಾಯಿಯ ಹುಣ್ಣ ಮತ್ತು ಅನ್ನನಾಳ ಸೇರಿದಂತೆ ಕ್ಯಾನ್ಸರ್ ಬರುವ ಅಪಾಯವನ್ನು ತಡೆಯುತ್ತದೆ.

ಸೇಬಿನಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇರುವ ಕಾರಣ ಹೆಚ್ಚು ಹೊತ್ತಿನವರೆಗೆ ಹೊಟ್ಟೆ ತುಂಬಿದ ಭಾವನೆ ಮೂಡಿಸಿ ಅನಗತ್ಯ ಆಹಾರ ಸೇವನೆಯಿಂದ ತಡೆಯುತ್ತದೆ. ಒಂದು ಅಧ್ಯಯನದಲ್ಲಿ ಕಂಡುಕೊಂಡ ಪ್ರಕಾರ ಊಟಕ್ಕೂ ಮೊದಲು ಕೆಲವು ಸೇಬಿನ ತುಂಡುಗಳನ್ನು ಸೇವಿಸಿದ ವ್ಯಕ್ತಿಗಳು ಊಟಕ್ಕೂ ಮೊದಲು ಸೇಬಿನ ಸಾಸ್ ಅಥವಾ ಸೇಬಿನ ರಸವನ್ನು ಸೇವಿಸಿದಕ್ಕಿಂತಲೂ ಹೆಚ್ಚಾಗಿ ಹೊಟ್ಟೆ ತುಂಬಿದ್ದ ಭಾವನೆ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ.

ಸೇಬಿನಲ್ಲಿರುವ ಆಂಟಿ ಆಕ್ಸಿಡೆಂಟುಗಳಲ್ಲಿ ಒಂದಾದ ಕ್ವೆರ್ಸಟಿನ್ ನ್ಯೂರಾನ್ ಗಳಲ್ಲಿ ಉರಿಯೂತ ಮತ್ತು ಆಕ್ಸಿಡೀಕರಣ ದಿಂದ ಎದುರಾಗುವ ಜೀವಕೋಶಗಳ ಸಾವನ್ನು ಕಡಿಮೆಗೊಳಿಸುತ್ತದೆ

ಸೇಬಿನ ಸೇವನೆಯಿಂದ ತ್ವಚೆ ಕಾಂತಿಯುಕ್ತ ಮತ್ತು ಸಹಜವರ್ಣ ಪಡೆಯುತ್ತದೆ. ಅಲ್ಲದೇ ವೃದ್ದಾಪ್ಯದ ಚಿಹ್ನೆಗಳನ್ನು ತಡವಾಗಿಸುತ್ತದೆ ಮತ್ತು ಇದರಲ್ಲಿರುವ ಹಲವಾರು ಆಂಟಿಆಕ್ಸಿಡೆಂಟುಗಳು ತ್ವಚೆಗೆ ಅಗತ್ಯ ಆರ್ದ್ರತೆಯನ್ನು ಒದಗಿಸುತ್ತವೆ.


Share with

Leave a Reply

Your email address will not be published. Required fields are marked *