ವೀಕ್ಷಕವಾಣಿ: ಧರ್ಮಗ್ರಂಥಗಳಲ್ಲಿ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಬೃಹಸ್ಪತಿ ಗ್ರಹದ ಅನುಕೂಲವನ್ನು ಪಡೆಯಲು ಗುರುವಾರದಂದು ಕೆಲವೊಂದು ಕೆಲಸಗಳನ್ನು ಮಾಡಬಾರದೆಂದು ಹೇಳಲಾಗಿದೆ. ಈ ಕೆಳಗಿನ ಕೆಲಸಗಳನ್ನು ಗುರುವಾರ ಮಾಡುವುದರಿಂದ ಜೀವನದಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರ ಮತ್ತು ಧರ್ಮಗ್ರಂಥ ಹೇಳುತ್ತದೆ.
ಗುರು ಹಿರಿಯರು, ಪೋಷಕರು ಹಾಗೂ ಸಂತರು ಬೃಹಸ್ಪತಿಯನ್ನು ಪ್ರತಿನಿಧಿಸುತ್ತಾರೆ. ಹಾಗಾಗಿ ಗುರುವಾರ ಮಾತ್ರವಲ್ಲ, ಯಾವ ದಿನವೂ ಕೂಡ ಇವರನ್ನು ಅವಮಾನಿಸಬಾರದು. ಮನೆಯಲ್ಲಿ ಕಿಚಡಿ ಮಾಡಬಾರದು ಹಾಗೂ ಸೇವಿಸಲೂ ಬಾರದು. ಮಹಿಳೆಯರು ತಮ್ಮ ತಲೆಕೂದಲನ್ನು ತೊಳೆಯಬಾರದು. ಇದರಿಂದ ಸಂಪತ್ತು, ಸಮೃದ್ಧಿ ಹಾಗೂ ಸಂತೋಷ ಕಡಿಮೆಯಾಗುತ್ತದೆ ಮತ್ತು ಗುರುಬಲ ಕಡಿಮೆಯಾಗುತ್ತದೆ ಎನ್ನಲಾಗಿದೆ.
ಗುರುವಾರದಂದು ಮನೆಯಲ್ಲಿ ಉಗುರುಗಳನ್ನು ಕತ್ತರಿಸಬಾರದು. ಇದರಿಂದ ನಕಾರಾತ್ಮಕ ಶಕ್ತಿಗಳು ಮನೆಯನ್ನು ಪ್ರವೇಶಿಸಬಹುದು. ದಿನ ಪುರುಷರಾಗಲಿ ಅಥವಾ ಮಹಿಳೆಯರಾಗಲಿ ತಲೆ ಕೂದಲನ್ನು ಕತ್ತರಿಸಬಾರದು. ಇದು ಗುರುಬಲವನ್ನು ದುರ್ಬಲಗೊಳಿಸುತ್ತದೆ ಮತ್ತು ಜೀವನದಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತದೆ.