ವಿಜಯದಶಮಿಯಂದು ಜನಿಸಿದ ಹೆಣ್ಣು ಮಗುವನ್ನು ದೇವಿಯಂತೆ ಅಲಂಕರಿಸಿದ ವೈದ್ಯೆ

Share with

ಭಾರತದಲ್ಲಿ ಅದ್ದೂರಿಯಾಗಿ ಆಚರಿಸುವ ಹಬ್ಬಗಳಲ್ಲಿ ನವರಾತ್ರಿ ಹಬ್ಬವೂ ಒಂದು. ಒಂದು ವಾರದ ಹಿಂದೆ ನವರಾತ್ರಿ ಮತ್ತು ವಿಜಯದಶಮಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗಿದೆ. ಇದೀಗ ವಿಜಯದಶಮಿ ಹಬ್ಬದ ದಿನದ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್‌ ಆಗಿದ್ದು, ಈ ಹಬ್ಬದ ದಿನ ಹುಟ್ಟಿದ ಹೆಣ್ಣು ಮಗುವಿಗೆ ವೈದ್ಯೆಯೊಬ್ಬರು ದುರ್ಗಾಮಾತೆಯ ಅಲಂಕಾರವನ್ನು ಮಾಡಿ, ಬಹಳ ವಿಶೇಷ ರೀತಿಯಲ್ಲಿ ಮುದ್ದು ದೇವಿಯನ್ನು ಕುಟುಂಬಸ್ಥರಿಗೆ ಪರಿಚಯಿಸಿದ್ದಾರೆ. ಸದ್ಯ ಈ ಸುಂದರ ದೃಶ್ಯ ನೋಡುಗರ ಮನ ಗೆದ್ದಿದೆ.

ಹೆಣ್ಣು ಮಕ್ಕಳನ್ನು ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಹಾಗೇ ಇಲ್ಲೊಂದು ಕುಟುಂಬದಲ್ಲಿ ವಿಜಯ ದಶಮಿಯ ಪವಿತ್ರ ದಿನದಂದು ಹೆಣ್ಣು ಮಗುವಿನ ಜನನವಾಗಿದ್ದು, ಈ ವಿಶೇಷ ದಿನದಂದು ಹುಟ್ಟಿದ ಈ ಮಗುವಿಗೆ ಆಸ್ಪತ್ರೆಯ ವೈದ್ಯೆಯೊಬ್ಬರು ದುರ್ಗಾ ದೇವಿಯಂತೆ ಬಟ್ಟೆ ತೊಡಿಸಿ, ನಂತರ ಮಗುವನ್ನು ಕುಟುಂಬಸ್ಥರ ಕೈಗೆ ಕೊಟ್ಟಿದ್ದಾರೆ. ಈ ಹೃದಯಸ್ಪರ್ಶಿ ದೃಶ್ಯ ಎಲ್ಲೆಡೆ ವೈರಲ್‌ ಆಗುತ್ತಿದೆ.

ವಿನೀತಾ ಸಿಂಗ್‌ (biharigurl) ಎಂಬವರು ಈ ಕುರಿತ ವಿಡಿಯೋವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ವಿಜಯದಶಮಿಯಂದು ಜನಿಸಿದ ಹೆಣ್ಣು ಮಗುವನ್ನು ದುರ್ಗಾ ದೇವಿಯಂತೆ ಕಂಗೊಳಿಸಿದ ವೈದ್ಯೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ವೈದ್ಯೆಯೊಬ್ಬರು ವಿಜಯದಶಮಿಯ ದಿನದಂದು ಜನಿಸಿದ ಮಗುವಿಗೆ ಕೆಂಪು ಬಟ್ಟೆ, ಕುಂಕುಮ, ಕಿರೀಟ ತೊಡಿಸಿ ದುರ್ಗಾ ದೇವಿಯಂತೆ ಸಿಂಗರಿಸಿದ ದೃಶ್ಯವನ್ನು ಕಾಣಬಹುದು. ಹೀಗೆ ದೇವಿಯಂತೆ ಅಲಂಕಾರಗೊಂಡ ಮಗುವನ್ನು ಬಹಳ ವಿಶೇಷ ರೀತಿಯಲ್ಲಿ ಅವರು ಕುಟುಂಬಸ್ಥರಿಗೆ ಪರಿಚಯಿಸಿದ್ದಾರೆ.

ಅಕ್ಟೋಬರ್‌ 17 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.1 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆಹಾ… ಎಷ್ಟು ಮುದ್ದಾಗಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಾನು ಇಂದು ಕಂಡ ಬೆಸ್ಟ್‌ ವಿಡಿಯೋದಲ್ಲಿ ಇದು ಕೂಡಾ ಒಂದುʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ಹೃದಯಸ್ಪರ್ಶಿ ದೃಶ್ಯವನ್ನು ಕಂಡು ಮನಸೋತಿದ್ದಾರೆ.


Share with

Leave a Reply

Your email address will not be published. Required fields are marked *