
ಬೀಜಿಂಗ್: ಹಲ್ಲಿನ ಸಮಸ್ಯೆಗೆಂದು ಆಸ್ಪತ್ರೆಗೆ ಬಂದ ವ್ಯಕ್ತಿಯ 23 ಹಲ್ಲುಗಳನ್ನು ಒಂದೇ ದಿನ ಕಿತ್ತು ಹಾಕಿದ ಆಘಾತಕಾರಿ ಘಟನೆ ಚೀನಾದಲ್ಲಿ ನಡೆದಿದೆ ಅಷ್ಟುಮಾತ್ರವಲ್ಲದೆ 23 ಹಲ್ಲುಗಳ ಬದಲಿಗೆ ಹನ್ನೆರಡು ಹೊಸ ಹಲ್ಲುಗಳನ್ನು ಅದೇ ದಿನ ಇರಿಸಿದ್ದು ಇದೀಗ ರೋಗಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಈ ಘಟನೆ ನಡೆದಿರುವುದು ಚೀನಾದ ಯೋಂಗ್‌ಕಾಂಗ್ ನಗರದಲ್ಲಿ. ಘಟನೆಯ ಕುರಿತು ಮೃತ ವ್ಯಕ್ತಿಯ ಮಗಳೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಗಳಿಂದ ವಿಚಾರ ಬಹಿರಂಗ:
ಘಟನೆಯ ಕುರಿತು ಮೃತ ವ್ಯಕ್ತಿಯ ಮಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾಳೆ ಇದರಲ್ಲಿ ತನ್ನ ತಂದೆ ಧೀರ್ಘಕಾಲದಿಂದ ಹಲ್ಲುನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು ಹಾಗಾಗಿ ಹಲ್ಲಿನಾಚಿಕಿತ್ಸೆಯಲ್ಲಿ ಪರಿಣತಿ ಹೊಂದಿದ ವೈದ್ಯರ ಬಳಿ ಚಿಕಿತ್ಸೆಗಾಗಿ ಕಳೆದ ತಿಂಗಳು ಆಗಸ್ಟ್ 14 ರಂದು ಯೋಂಗ್‌ಕಾಂಗ್ ನಲ್ಲಿರುವ ದಂತ ಚಿಕಿತ್ಸಾಲಯಕ್ಕೆ ಹೋಗಿದ್ದಾರೆ. ಈ ವೇಳೆ ಪರಿಶೀಲಿಸಿದ ವೈದ್ಯರು ಹಲ್ಲುಗಳನ್ನು ತೆಗೆಯಬೇಕಾಗುತ್ತದೆ ಅದರ ಬದಲಿಗೆ ಹೊಸ ಹಲ್ಲುಗಳನ್ನು ಇಡಬೇಕಾಗುತ್ತದೆ ಎಂದು ಹೇಳಿದ್ದಾರೆ ಎಂಬುದಾಗಿ ಪೋಸ್ಟ್ ಮಾಡಿದ್ದಾಳೆ.