ಕುಂದಾಪುರ: ಕೋಟ ಶ್ರೀಮಾತಾ ಆಸ್ಪತ್ರೆಯ ಆಡಳಿತ ಪಾಲುದಾರ ಡಾ.ಸತೀಶ್ ಪೂಜಾರಿ ಸಾಸ್ತಾನ(52 ವ) ಅವರು ಜು.11 ರಂದು ಗುರುವಾರ ಮುಂಜಾನೆ ಹೃದಯಾಘಾ*ತದಿಂದಾಗಿ ಇಹಲೋಕ ತ್ಯಜಿಸಿದ್ದಾರೆ. ಡಾ.ಸತೀಶ ಪೂಜಾರಿ ಖ್ಯಾತ ಇ.ಎನ್.ಟಿ ತಜ್ಞರಾಗಿದ್ದು, ಇವರು ಕುಂದಾಪುರ ಶ್ರಿಮಾತಾ ಆಸ್ಪತ್ರೆ, ಕೋಟ ಮನಸ್ಮಿತಾ ಫೌಂಡೇಷನ್ ಮೊದಲಾದ ಸಂಸ್ಥೆಗಳ ಆಡಳಿತ ಪಾಲುದಾರರಾಗಿದ್ದರು. ಜೊತೆಗೆ ಹವ್ಯಾಸಿ ಗಾಯಕರಾಗಿದ್ದ ಇವರು ಹಲವು ಭಕ್ತಿಗೀತೆ, ಆಲ್ಬಾಮ್ ಸಾಂಗ್‌ಗಳಿಗೆ ಧ್ವನಿಯಾಗಿದ್ದರು. ಕೆಲವು ಕಿರುಚಿತ್ರಗಳಲ್ಲಿಯೂ ಬಣ್ಣ ಹಚ್ಚಿದ್ದು, ಸಾಂಸ್ಕೃತಿಕ ಹಾಗೂ ಕಲಾ ಕ್ಷೇತ್ರಗಳಲ್ಲಿ ಹೆಚ್ಚು ಒಲವು ಹೊಂದಿದ್ದರು.
‘ನನ್ನ ಹಾಡು ನನ್ನದು’ ಎಂಬ ಕಾರ್ಯಕ್ರಮದ ಮೂಲಕ ಕುಂದಾಪುರದ ಜನಮನ ಗೆದ್ದಿದ್ದರು. ಅಲ್ಲದೇ ಸಂಗೀತ ಕ್ಷೇತ್ರದ ಮಹಾನ್ ಸಾಧಕಿ ಎಸ್ ಜಾನಕಿಯವರನ್ನು ಕುಂದಾಪುರಕ್ಕೆ ಕರೆಸಿರುವ ಹೆಗ್ಗಳಿಕೆ ಇವರದಾಗಿದೆ. ಎಸ್ ಜಾನಕಿ ಅವರ ಕಟ್ಟ ಅಭಿಮಾನಿಯಾಗಿರುವ ಇವರು ಪ್ರತೀ ವರ್ಷ ಕೋಟೇಶ್ವರದಲ್ಲಿ ಡಾ ಎಸ್ ಜಾನಕಿ ರಾಷ್ಟ್ರೀಯ ಪುರಸ್ಕಾರ ಆಯೋಜಿಸಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಿ ಗೌರವಿಸುವ ಕೆಲಸ ಮಾಡುತ್ತಿದ್ದರು. ಮನಸ್ಮಿತಾ ಫೌಂಡೇಷನ್ ಮೂಲಕ ಸಮಾಜ ಸೆವೆಯಲ್ಲೂ ತಮ್ಮನ್ನೂ ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ , ಓರ್ವ ಪುತ್ರನನ್ನು ಅಗಲಿದ್ದಾರೆ.