
ಇಲ್ಲೊಬ್ಬ ವ್ಯಕ್ತಿ ಮಹೀಂದ್ರಾ ಕಾರಿಗೆ ಸಗಣಿಯನ್ನು ಲೇಪನ ಮಾಡಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹೌದು, ಮಹಾರಾಷ್ಟ್ರದ ಪಂಢರಪುರದ ಆಯುರ್ವೇದ ವೈದ್ಯರೊಬ್ಬರು ಸುಮಾರು 15 ಲಕ್ಷ ರೂಪಾಯಿ ಬೆಲೆ ಬಾಳುವ ಮಹೀಂದ್ರಾ ಎಕ್ಸ್ಯುವಿ 300 ಕಾರನ್ನು ಸಗಣಿಯಿಂದ ಅಲಂಕಾರ ಮಾಡಿ ಗಮನ ಸೆಳೆದಿದ್ದಾರೆ. ಸದ್ಯ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ಗೂ ಮೀರಿದೆ. ಇದರಿಂದ ಬಿಸಿಲು ಕೂಡ ಹೆಚ್ಚಾಗುತ್ತಿದೆ. ಹಾಗಾಗಿ ತಮ್ಮ ಕಾರನ್ನು ಕೂಲ್ ಆಗಿಡಬೇಕು ಎಂಬ ಉದ್ದೇಶದಿಂದ ಸಗಣಿ ಕೋಟಿಂಗ್ ಮಾಡಿಸಿರುವುದಾಗಿ ಹೇಳಿಕೊಂಡಿದ್ದಾರೆ. ಹಸುವಿನ ಸಗಣಿ ಮತ್ತು ಹಸುವಿನ ಮೂತ್ರದಿಂದ ಮಿಶ್ರಣ ಮಾಡಿ ಇದನ್ನು ಕಾರಿಗೆ ಲೇಪಿಸಿದ್ದಾರೆ. ಇದರ ಬಳಿಕ ಕಾರಿನ ತಾಪಮಾನ ಅರ್ಧಕ್ಕಿಂತಲೂ ಕಡಿಮೆಯಾಗಿದೆ ಎಂದು ವೈದ್ಯರು ಅಚ್ಚರಿ ಹೇಳಿಕೆ ನೀಡಿದ್ದಾರೆ.




