ಆಗ್ರಾ, ನವೆಂಬರ್ 20: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಮಗ ಡೊನಾಲ್ಡ್ ಟ್ರಂಪ್ ಜೂನಿಯರ್ ತನ್ನ ಪತ್ನಿ ಮತ್ತು ವಿಐಪಿ ತಂಡದೊಂದಿಗೆ ಬೃಹತ್ ಭದ್ರತೆಯ ನಡುವೆ ವಿಶ್ವ ಪ್ರಸಿದ್ಧ ತಾಜಮಹಲ್ಗೆ ಭೇಟಿ ನೀಡಿದ್ದಾರೆ. ಇಂದು ಬೆಳಗ್ಗೆ ಡೊನಾಲ್ಡ್ ಟ್ರಂಪ್ ಜೂನಿಯರ್ ಗುರುವಾರ ಆಗ್ರಾಕ್ಕೆ ತೆರಳಿ ತಾಜ್ ಮಹಲ್ಗೆ ಭೇಟಿ ನೀಡಿದರು. ಈ ಹಿಂದೆ 2018ರಲ್ಲೂ ಅವರು ತಾಜಮಹಲ್ಗೆ ಭೇಟಿ ನೀಡಿದ್ದರು. ಇದು ಅವರ 2ನೇ ಭೇಟಿ. ಇಂದು ಅವರು ತಮ್ಮ ಹೆಂಡತಿಯ ಜೊತೆ ತಾಜಮಹಲ್ ಎದುರು ಕುಳಿತು ಫೋಟೋಗೆ ಪೋಸ್ ನೀಡಿದರು. ತಾಜ್ ಮಹಲ್ನ ಫೋಟೋ ಪಾಯಿಂಟ್ಗಳಲ್ಲಿ ಒಂದಾಗಿರುವ ಐಕಾನಿಕ್ ಡಯಾನಾ ಬೆಂಚ್ನಲ್ಲಿ ಕುಳಿತು ಅವರು ಫೋಟೋ ಕ್ಲಿಕ್ಕಿಸಿಕೊಂಡರು.
ಡೊನಾಲ್ಡ್ ಟ್ರಂಪ್ ಅವರ ಮಗನ ಭೇಟಿಯ ಹಿನ್ನೆಲೆಯಲ್ಲಿ ತಾಜಮಹಲ್ ಸುತ್ತ ಭಾರೀ ಭದ್ರತೆ ಏರ್ಪಡಿಸಲಾಗಿತ್ತು. ಅಲ್ಲಲ್ಲಿ ಅನೇಕ ಅಮೇರಿಕನ್ ಏಜೆನ್ಸಿಗಳ ಅಮೇರಿಕನ್ ಭದ್ರತಾ ಏಜೆಂಟ್ಗಳನ್ನು ಸಹ ನಿಯೋಜಿಸಲಾಗಿತ್ತು. ತಾಜಮಹಲ್ಗೆ ಸಾಮಾನ್ಯ ಸಂದರ್ಶಕರಿಗೆ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು.





