ಬಂಟ್ವಾಳ: ಅ. 28ರಂದು ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಮಂಗಳೂರಿನ ಅನಿಮಲ್ ಕೇರ್ ಟ್ರಸ್ಟ್ ಸಂಸ್ಥೆಯವರು ಬೀದಿ ನಾಯಿಯನ್ನು ಹಿಡಿಯಲಿದ್ದಾರೆ. ಹೀಗಾಗಿ ತಮ್ಮ ಸಾಕು ನಾಯಿಗಳನ್ನು ಹೊರಗೆ ಬಿಡಬೇಡಿ ಎಂದು ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೀದಿನಾಯಿಗಳ ಸಂತಾನ ನಿಯಂತ್ರಣ (ಎನಿಮಲ್ ಬರ್ತ್ ಕಂಟ್ರೋಲ್ ರೂಲ್ಸ್ 2023) ನಿಯಮದಂತೆ, ಬಂಟ್ವಾಳ ಪುರಸಭಾ ವ್ಯಾಪ್ತಿಯ ಬೀದಿ ನಾಯಿಗಳನ್ನು ಹಿಡಿದು, ಮಂಗಳೂರಿನ ಅನಿಮಲ್ ಕೇರ್ ಟ್ರಸ್ಟ್ ಸಂಸ್ಥೆಯಲ್ಲಿ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸಿ, ರೇಬಿಸ್ ಲಸಿಕೆ ನೀಡಿ, ಮೂರು ದಿನಗಳ ಆರೈಕೆ ಬಳಿಕ ಹಿಡಿದ ಸ್ಥಳಕ್ಕೆ ವಾಪಸ್ ತಂದುಬಿಡುವ ಉದ್ದೇಶಕ್ಕಾಗಿ 28ರಂದು ಶನಿವಾರ ಬಂಟ್ವಾಳ ಪುರಸಭಾ ವ್ಯಾಪ್ತಿಯ ಬೀದಿ ನಾಯಿಗಳನ್ನು ಅನಿಮಲ್ ಕೇರ್ ಟ್ರಸ್ಟ್ ಸಂಸ್ಥೆಯವರು ಹಿಡಿಯಲಿದ್ದಾರೆ.
ಪುರಸಭಾ ವ್ಯಾಪ್ತಿಯ ಸಾರ್ವಜನಿಕರು, ಸಾಕುನಾಯಿಗಳನ್ನು ಹೊರಗಡೆ ಬೀದಿಗೆ ಬಿಡದಂತೆ ಬೀದಿನಾಯಿಗಳ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಪುರಸಭೆ ಮುಖ್ಯಾಧಿಕಾರಿ ವಿನಂತಿಸಿದ್ದಾರೆ.