ಉಪ್ಪಳ: ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ಎಂ.ಎಲ್ ಅಶ್ವಿನಿ ಪಜ್ವರ ಚುನಾವಣಾ ಪ್ರಚಾರಾರ್ಥವಾಗಿ ಬಿಜೆಪಿ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಪ್ರತಾಪನಗರ ೮೩ನೇ ಬೂತ್‌ನಲ್ಲಿ ಮನೆ, ಮನೆ ಸಂಪರ್ಕದಿಂದ ಮತ ಯಾಚನೆ ನಡೆಯಿತು. ವಾರ್ಡ್ ಪ್ರತಿನಿಧಿ ಸುಧಾಗಣೇಶ್, ವಿಜಯಲಕ್ಷ್ಮೀ ರೈ, ಭುವನೇಶ್ವರೀ, ಶ್ಯಾಮಲ ಗಣೇಶ್, ನಾರಾಯಣ ಮಣಿಯಾಣಿ, ಜಯರಾಜ್, ಗುರುನಾಥ ರೈ, ಮೊದಲಾದವರು ಉಪಸ್ಥಿತರಿದ್ದರು.