
ಸೌತೆಕಾಯಿ ಜ್ಯೂಸ್ ನಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?ಸೌತೆಕಾಯಿ, ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಸಿಗುವ ತರಕಾರಿ ಜಾತಿಗೆ ಸೇರಿದ ಒಂದು ಆಹಾರ ಪದಾರ್ಥ. ಇದು ತನ್ನಲ್ಲಿ ಹೆಚ್ಚಿನ ನೀರಿನ ಅಂಶವನ್ನು ಹೊಂದಿದ್ದು ಮನುಷ್ಯನಿಗೆ ಹಲವಾರು ಬಗೆಯ ಆರೋಗ್ಯ ಪ್ರಯೋಜನಗಳನ್ನು ಒದಗಿಸಿಕೊಡುತ್ತದೆ. ಖನಿಜಾಂಶಗಳು, ವಿಟಮಿನ್ ಗಳು, ನಾರಿನ ಅಂಶ ಮತ್ತು ಹಲವಾರು ಪೌಷ್ಟಿಕ ಸತ್ವಗಳನ್ನು ಒಳಗೊಂಡ ಸೌತೆಕಾಯಿ ಮನುಷ್ಯನ ದೇಹದ ಆರೋಗ್ಯ ಮತ್ತು ಮೆದುಳಿನ ಆರೋಗ್ಯಕ್ಕೆ ಬಹಳ ಸಹಾಯಕ.
ಕೆಲವು ಆರೋಗ್ಯ ತಜ್ಞರು ಹೇಳುವ ಪ್ರಕಾರ ಒಬ್ಬ ಮನುಷ್ಯ ಪ್ರತಿ ದಿನ 6 ರಿಂದ 8 ಗ್ಲಾಸ್ ನೀರು ಕುಡಿಯಬೇಕು. ಇದು ಬಲವಂತದ ಹೇಳಿಕೆಯಲ್ಲ. ಏಕೆಂದರೆ ಮನುಷ್ಯನ ದೇಹ ಆಂತರಿಕವಾಗಿ ಮುಕ್ಕಾಲು ಪಾಲು ನೀರಿನ ಅಂಶವನ್ನೇ ಹೊಂದಿದೆ. ಆದರೆ ಬೇಸಿಗೆ ದಿನಗಳಲ್ಲಿ ಈ ನೀರಿನ ಅಂಶ ಇದ್ದಕ್ಕಿದ್ದಂತೆ ಬೆವರಿನ ರೂಪದಲ್ಲಿ ದೇಹದಿಂದ ಹೊರಗೆ ಹರಿದು ಬರುತ್ತದೆ. ಹಾಗಾಗಿ ವೈದ್ಯರ ಬಳಿ ಹೋದಂತಹ ಸಂದರ್ಭದಲ್ಲಿ ಅವರು ಹೆಚ್ಚು ನೀರು ಸೇವಿಸಲು ಸೂಚಿಸುತ್ತಾರೆ. ಆದರೆ ಬರೀ ನೀರು ಕುಡಿಯಲು ಯಾರೂ ಅಷ್ಟಾಗಿ ಮುಂದೆ ಬರುವುದಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕುಡಿಯುವ ನೀರಿಗೆ ಕೆಲವು ಸೌತೆಕಾಯಿ ಚೂರುಗಳನ್ನು ಹಾಕಿ ಟಿಪಾಯಿಸಿ ಕುಡಿಯುವುದರಿಂದ ನೀರಿನ ರುಚಿಯೂ ಹೆಚ್ಚುತ್ತದೆ ಮತ್ತು ದೇಹಕ್ಕೆ ನೀರಿನ ಅಂಶ ಸೇರಿದ ರೀತಿಯೂ ಆಗುತ್ತದೆ.
ಸೌತೆಕಾಯಿಯಲ್ಲಿ ನೀರಿನ ಅಂಶ ಹೆಚ್ಚಾಗಿರುವುದರಿಂದ ಕೇವಲ ಮನುಷ್ಯನ ದೇಹಕ್ಕೆ ನಿರ್ಜಲೀಕರಣದ ಸಮಸ್ಯೆಯಿಂದ ಮುಕ್ತ ಮಾಡುವುದಲ್ಲದೆ ತನ್ನಲ್ಲಿನ ಆಂಟಿ – ಆಕ್ಸಿಡೆಂಟ್ ಅಂಶಗಳಿಂದ ದೇಹದಲ್ಲಿ ಕಂಡು ಬರುವ ಫ್ರೀ ರಾಡಿಕಲ್ಸ್ ವಿರುದ್ಧ ಹೋರಾಡಿ ದೇಹದಿಂದ ವಿಷಪೂರಿತ ಅಂಶಗಳನ್ನು ಹೊರ ಹಾಕಲು ಸಹಾಯವಾಗುತ್ತದೆ
ಕೆಲವು ಅಧ್ಯಯನಗಳು ಇದು ನಿಜ ಎಂದು ಹೇಳುತ್ತಿವೆ. ಏಕೆಂದರೆ ಸೌತೆಕಾಯಿಯಲ್ಲಿ ನಿಮ್ಮ ದೇಹವನ್ನು ಕ್ಯಾನ್ಸರ್ ಎಂಬ ಮಾರಕ ಕಾಯಿಲೆಯಿಂದ ರಕ್ಷಣೆ ಮಾಡುವ ಅಂಶಗಳಾದ cucurbitacins ಮತ್ತು ಪೌಷ್ಟಿಕಾಂಶಗಳ ಗುಂಪು ಎಂದು ಕರೆಸಿಕೊಂಡ lignans ಅಂಶಗಳು ಅಡಗಿವೆ. ಫ್ಲೇವನಾಯ್ಡ್ fisetin ಎಂಬ ನಾರಿನ ಅಂಶ ಸೌತೆಕಾಯಿಯಲ್ಲಿದ್ದು, ಪ್ರೊಸ್ಟೇಟ್ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣ ಲಕ್ಷಣಗಳನ್ನು ಪಡೆದಿರುತ್ತದೆ.
ಮನುಷ್ಯನಿಗೆ ತನ್ನ ದೇಹದಲ್ಲಿ ಹರಿಯುವ ರಕ್ತದ ಸಂಚಾರದಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾದರೆ, ಅದು ಆತನ ದೇಹದ ರಕ್ತದ ಒತ್ತಡದ ಮೇಲೆ ನೇರವಾದ ಪರಿಣಾಮ ಬೀರಿ ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ. ಇಂತಹ ಸಮಯದಲ್ಲಿ ಸೌತೆಕಾಯಿಯ ಸೇವನೆ ನಿಜಕ್ಕೂ ಅದ್ಭುತವಾಗಿ ಒಳ್ಳೆಯ ಪ್ರಯೋಜನ ತಂದುಕೊಡುತ್ತದೆ. ಏಕೆಂದರೆ ಸೌತೆಕಾಯಿಯಲ್ಲಿ ಪೊಟ್ಯಾಶಿಯಂ ಎಂಬ ಎಲೆಕ್ಟ್ರೋಲೈಟ್ ಅಂಶವಿದ್ದು, ಇದು ಮೂತ್ರ ಪಿಂಡಗಳಲ್ಲಿನ ಸೋಡಿಯಂ ಅಂಶದ ಮಟ್ಟವನ್ನು ನಿಯಂತ್ರಣ ಮಾಡುತ್ತದೆ. ಆದ್ದರಿಂದ ಹೆಚ್ಚಾಗಿ ಸೌತೆಕಾಯಿ ಮಿಶ್ರಿತ ನೀರು ಅಥವಾ ಸೌತೆಕಾಯಿ ಜ್ಯೂಸ್ ಕುಡಿಯು ವುದರಿಂದ ದೇಹದಲ್ಲಿ ಪೊಟ್ಯಾಷಿಯಂ ಅಂಶ ಹೆಚ್ಚಾಗಿ ರಕ್ತದ ಒತ್ತಡ ನಿಯಂತ್ರಣಕ್ಕೆ ಬರುತ್ತದೆ.