ಉಡುಪಿ: ಖಾಸಗಿ ಬಸ್ ಚಾಲಕ ಹಾಗೂ ಆತನ ಪ್ರಿಯತಮೆಯ ನಡುವೆ ವಾಗ್ವಾದ ಉಂಟಾಗಿ ಆತ ಬಸ್ ಅನ್ನು ನಿಲ್ಲಿಸಿ ಪರಾರಿಯಾದ ಘಟನೆ ನಡೆದಿದೆ. ಉಡುಪಿಯಿಂದ ಸಂತೆಕಟ್ಟೆ ಭಾಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ಗೆ ನಿಟ್ಟೂರು ಬಳಿ ಬಸ್ ಚಾಲಕನ ಪ್ರೇಯಸಿ ಬಸ್ ಹತ್ತಿದ್ದಾಳೆ.
ಅಲ್ಲಿಂದಲೇ ಅವರ ನಡುವೆ ವಾಗ್ಯುದ್ದ ನಡೆದಿದೆ. ನಿರ್ವಾಹಕ ಸಮಾಧಾನಪಡಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಪ್ರೇಯಸಿಯ ಕಿರಿಕಿರಿಯಿಂದ ರೋಸಿ ಹೋದ ಚಾಲಕ ಆಶೀರ್ವಾದ್ ಚಿತ್ರಮಂದಿರದ ಸ್ವಲ್ಪ ಮುಂದಕ್ಕೆ ಬಸ್ ನಿಲ್ಲಿಸಿ ಹೋಗಿದ್ದಾನೆ. ಪ್ರೇಯಸಿ ಮತ್ತೊಂದು ದಾರಿ ಹಿಡಿದರು.
ಪ್ರಯಾಣಿಕರು ಇದನ್ನೆಲ್ಲ ನೋಡಿಯೇ ಬಾಕಿಯಾಗಿದ್ದಾರೆ. ಸಂಜೆ ವೇಳೆ ಈ ಘಟನೆ ನಡೆದಿದ್ದು, ಬಳಿಕ ಬಸ್ ನಿರ್ವಾಹಕನೇ ಬಸ್ ಅನ್ನು ಚಲಾಯಿಸಿಕೊಂಡು ಹೋದ ಘಟನೆ ನಡೆಯಿತು. ಬಸ್ ನಿಲ್ಲಿಸಿ ತೆರಳಿದ ಚಾಲಕನ ನಿರ್ಲಕ್ಷ್ಯತನಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.