ಒಂಟಿತನವನ್ನು ಹೋಗಲಾಡಿಸಲು ವೀಕೆಂಡ್‌ನಲ್ಲಿ ಆಟೋ ಓಡಿಸುವ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್‌

Share with

ಸಾಮಾನ್ಯವಾಗಿ ಹೆಚ್ಚಿನವರು ವಾರಪೂರ್ತಿ ದುಡಿದು, ವಾರಾಂತ್ಯದಲ್ಲಿ ಪಬ್‌, ಪಾರ್ಟಿ, ಟ್ರಿಪ್‌ ಅಂತ ಎಂಜಾಯ್‌ ಮಾಡುತ್ತಾ ಒಂಟಿತನದಿಂದ ದೂರವಿರಲು ಪ್ರಯತ್ನಿಸುತ್ತಿರುತ್ತಾರೆ. ಆದ್ರೆ ಇಲ್ಲೊಬ್ಬ ಮೈಕ್ರೋಸಾಫ್ಟ್‌ ಟೆಕ್ಕಿ ತನ್ನ ಒಂಟಿತನವನ್ನು ಹೋಗಲಾಡಿಸಲು ವಾರಾಂತ್ಯದಲ್ಲಿ ಆಟೋ ಓಡಿಸುವ ಕೆಲಸ ಮಾಡುತ್ತಾರಂತೆ. ಈ ಕುರಿತ ಸುದ್ದಿಯೊಂದು ಇದೀಗ ವೈರಲ್‌ ಆಗುತ್ತಿದೆ.

ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಸಮಯದಲ್ಲಿ ಒಂಟಿತನ ಎಂಬುದು ಕಾಡುತ್ತದೆ. ಇದಕ್ಕೆ ಹಲವು ಕಾರಣಗಳಿರಬಹುದು. ಇದರಿಂದ ಹೊರಬರಲು ಹೆಚ್ಚಿನವರು ಸ್ನೇಹಿತರೊಂದಿಗೆ ಟ್ರಿಪ್‌ ಹೋಗುವಂತಹದ್ದು, ಆಪ್ತರೊಂದಿಗೆ ಹೆಚ್ಚು ಮಾತನಾಡುವಂತಹದ್ದು ಮಾಡುತ್ತಿರುತ್ತಾರೆ. ಆದ್ರೆ ಇಲ್ಲೊಬ್ಬರು ಟೆಕ್ಕಿ ವೀಕೆಂಡ್‌ನಲ್ಲಿ ಆಟೋ ಓಡಿಸುವ ಮೂಲಕ ತನ್ನ ಒಂಟಿತನದ ಭಾವನೆಯನ್ನು ಹೋಗಲಾಡಿಸಲು ವಿಭಿನ್ನ ದಾರಿಯನ್ನು ಕಂಡುಕೊಂಡಿದ್ದಾರೆ. ಇವರ ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಇದು ಬೆಂಗಳೂರಿನ ಮೈಕ್ರೋಸಾಫ್ಟ್‌ ಇಂಜಿನಿಯರ್‌ ಒಬ್ಬರ ಕಥೆ. ವಾರಪೂರ್ತಿ ಸಾಫ್ಟ್‌ವೇರ್‌ ಕಂಪೆನಿಯಲ್ಲಿ ಲಕ್ಷಾಂತರ ಸಂಬಳ ಸಿಗುವ ಕೆಲಸ ಮಾಡುವ ಈ ಟೆಕ್ಕಿ, ವಾರಾಂತ್ಯದಲ್ಲಿ ನಮ್ಮ ಯಾತ್ರಿ ಆಟೋ ಓಡಿಸುವ ಕೆಲಸ ಮಾಡುತ್ತಿದ್ದಾರೆ.

ಇತ್ತೀಚಿಗಷ್ಟೆ ವ್ಯಕ್ತಿಯೊಬ್ಬರು ಕೋರಮಂಗಲದ ಹತ್ತಿರ ನಮ್ಮ ಯಾತ್ರಿ ಆಟೋ ಬುಕ್‌ ಮಾಡುತ್ತಾರೆ. ಆಟೋದಲ್ಲಿ ಕುಳಿತ ಬಳಿಕ ಅವರು ಡ್ರೈವರ್‌ನ ಬಟ್ಟೆಯಲ್ಲಿ ಮೈಕ್ರೋಸಾಫ್ಟ್‌ ಲೋಗೋ ಇರುವುದನ್ನು ಗಮನಿಸಿ ನೀವು ಮೈಕ್ರೋಸಾಫ್ಟ್‌ ಉದ್ಯೋಗಿಯೇ ಎಂದು ಕೇಳುತ್ತಾರೆ. ಹೀಗೆ ಮಾತುಕತೆ ಆರಂಭವಾಗಿ ಆ ಟೆಕ್ಕಿ, ಹೌದು ನಾವು ಸಾಫ್ಟ್‌ವೇರ್‌ ಇಂಜಿನಿಯರ್.‌ ಹಣಕ್ಕಾಗಿ ನಾನು ಈ ಆಟೋವನ್ನು ಓಡಿಸುತ್ತಿಲ್ಲ. ನನಗೆ ವಿಪರೀತವಾಗಿ ಒಂಟಿತನ ಎಂಬುದು ಕಾಡುತ್ತಿದೆ. ಈ ಒಂಟಿತನ ಮತ್ತು ಒತ್ತಡದಿಂದ ಮುಕ್ತಿ ಪಡೆಯಲು ನಾನು ಆಟೋ ಓಡಿಸುತ್ತೇನೆ ಎಂದು ಹೇಳಿದ್ದಾರೆ. ವಾರದಲ್ಲಿ ಐದು ದಿನ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಕೆಲಸ ಮಾಡಿ, ವೀಕೆಂಡ್‌ನಲ್ಲಿ ಎರಡು ದಿನ ಆಟೋ ಓಡಿಸುತ್ತೇನೆ. ಹೀಗೆ ಆಟೋ ಓಡಿಸುತ್ತಾ, ಬರುವ ಪ್ರಯಾಣಿಕರ ಬಳಿ ಮಾತನಾಡುತ್ತಾ, ನಾನು ಒಬ್ಬಂಟಿಯಾಗಿದ್ದೇನೆ ಎಂಬುದನ್ನು ಮರೆತು ಹಾಯಾಗಿ ಜೀವನ ಸಾಗಿಸುತ್ತಿದ್ದೇನೆ ಎಂಬುದನ್ನು ಹೇಳಿದ್ದಾರೆ.


Share with

Leave a Reply

Your email address will not be published. Required fields are marked *