ಮೈಸೂರು: ಅರಮನೆ ಸುತ್ತಮುತ್ತ ಡ್ರೋನ್ ಹಾರಾಟ ನಿಷೇಧ

Share with

ಭಾರತ & ಪಾಕ್ ನಡುವೆ ಕದನ ವಿರಾಮ ನಂತರ ದೇಶದೆಲ್ಲಡೆ ಭದ್ರತೆಯನ್ನು ಕೈಗೊಳ್ಳಲಾಗಿದ್ದು, ರಾಜ್ಯದಲ್ಲೂ ಕೂಡ ಕಟ್ಟೆಚ್ಚರ ವಹಿಸಲಾಗಿದೆ.

ಇದೀಗ ಮೈಸೂರು ಅರಮನೆಯ ಸುತ್ತಮುತ್ತಲು ಡ್ರೋನ್ ಹಾರಾಟ ನಿಷೇಧಿಸಿ ಅರಮನೆ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಭದ್ರತೆಯ ದೃಷ್ಟಿಯಿಂದ ವಿಶ್ವವಿಖ್ಯಾತ ಮೈಸೂರು ಅಂಬಾವಿಲಾಸ ಅರಮನೆ ಸುತ್ತ ಡ್ರೋನ್ ಹಾರಾಟ ನಿಷೇಧಿಸಿ, ಅರಮನೆಯ ಆಡಳಿತ ಮಂಡಳಿಯ ಉಪ ನಿರ್ದೇಶಕರು ಆದೇಶ ಹೊರಡಿಸಿ, ಅರಮನೆಯ 4 ಪ್ರಮುಖ ದ್ವಾರದಲ್ಲಿ ಪ್ರಕಟಣೆ ಫಲಕ ಹಾಕಿದ್ದಾರೆ.


Share with