ಜೋಡುಕಲ್ಲು ರಸ್ತೆ ಬದಿಯಲ್ಲಿ ಒಣಗಿದ ಮರದಿಂದ ಅಪಾಯ ಭೀತಿ: ತೆರವುಗೊಳಿಸಲು ಆಗ್ರಹ

Share with


ಉಪ್ಪಳ: ಕೈಕಂಬ-ಬಾಯಾರು ರಸ್ತೆಯ ಜೋಡುಕಲ್ಲು ಎಂಬಲ್ಲಿ ಒಣಗಿದ ಮರಗಳು ಯಾವುದೇ ಕ್ಷಣದಲ್ಲಿ ಧಾರಾಶಾಯಿಗೊಳ್ಳುವ ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ. ಈ ರಸ್ತೆ ಅಭಿವೃದ್ದಿಗೊಳಿಸುವ ವೇಳೆ ಗುತ್ತಿಗೆದಾರ ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ತೆರೆವುಗೊಳಿಸಿದ್ದರು. ಅದರೆ ಒಣಗಿದ ಈ ಮರವನ್ನು ತೆರವುಗೊಳಿಸದ ಹಿನ್ನೆಲೆಯಲ್ಲಿ ಅಪಾಯತಪ್ಪಿದ್ದಲ್ಲ  ಈ ಪರಿಸರದಿಂದ  ಪ್ರಮುಖ ವಿದ್ಯುತ್ ತಂತಿಹೊAದಿರುವ ಕಂಬಗಳುಯಿದ್ದು, ಮರ ಮುರಿದು ತಂತಿ ಮೇಲೆ ಬಿದ್ದಲ್ಲಿ  ಹಲವಾರು ಕಂಬಗಳು ರಸ್ತೆಗೆ ಮುರಿದು ಬೀಳಬಹುದಾಗಿದೆ. ದಿನನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದೆ. ಅಲ್ಲದೆ ಈ ಪರಿಸರದಲ್ಲಿ ವ್ಯಾಪಾರ ಸಂಸ್ಥೆಗಳು ಹೊಂದಿದ್ದು, ಜನನಿಬಿಡ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಅಪಾಯದ ಸ್ಥಿತಿಯಲ್ಲಿರುವ ಒಣಗಿದ ಮರಗಳನ್ನು ತೆರವುಗೊಳಿಸಲು ಮಂಗಲ್ಪಾಡಿ ಪಂಚಾಯತ್ ಸದಸ್ಯೆ ಸುಜಾತ.ಯು ಶೆಟ್ಟಿಯವರು ಈಗಾಗಲೇ ರಸ್ತೆ ಅಭಿವೃದ್ದಿಯ ಗುತ್ತಿಗೆದಾರರ ಪೈವಳಿಕೆಯಲ್ಲಿರುವ ಕಚೇರಿಗೆ ಲಿಖಿತ ಮನವಿಯನ್ನು ನೀಡಿದ್ದಾರೆ. ಅಪಾಯದ ಸ್ಥಿತಿಯಲ್ಲಿರುವ ಒಣಗಿದ ಮರವನ್ನು ಕೂಡಲೇ ತೆರವುಗೊಳಿಸಿ ಸಂಭವಿಸಬಹುದಾದ ದುರಂತವನ್ನು ತಪ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


Share with

Leave a Reply

Your email address will not be published. Required fields are marked *