
ಉಪ್ಪಳ: ವಿಶ್ವಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆಯುವ ದುರ್ಗಾವಾಹಿನಿ ಪ್ರಾಶಿಕ್ಷಣಾ ವರ್ಗದ ಆಮಂತ್ರಣ ಪತ್ರಿಕೆಯನ್ನು ಬುಧವಾರ ಕೊಂಡೆವೂರು ಮಠದಲ್ಲಿ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಬಿಡುಗಡೆಗೊಳಿಸಿದರು. ವಿಶ್ವಹಿಂದೂ ಪರಿಷತ್ ಮುಖಂಡರಾದ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ಜಯದೇವ ಖಂಡಿಗೆ, ಯಾದವ, ಸುರೇಶ್ ಶೆಟ್ಟಿ ಪರಂಕಿಲ, ದುರ್ಗಾವಾಹಿನಿ ಪ್ರಮುಖ್ ಸೌಮ್ಯ ಭಟ್ ಉಪಸ್ಥಿತರಿದ್ದರು. ಈ ತಿಂಗಳ ೧೯ರಿಂದ ೨೭ರ ತನಕ ನೀರ್ಚಾಲ್ ಮಹಾಜನ ಹೈಯರ್ ಸೆಕಂಡರಿ ಶಾಲೆಯಲ್ಲಿ ಪ್ರಾಶಿಕ್ಷಣಾ ವರ್ಗ ನಡೆಯಲಿದೆ.