
ಹಲಸಿನ ಹಣ್ಣಿನ ಹೊರಭಾಗ ಮುಳ್ಳು ಮತ್ತು ಒರಟಾಗಿ ಕಂಡರೂ, ಹಲಸಿನ ಹಣ್ಣಿನ ಒಳಭಾಗ ಹಳದಿಯಾಗಿದ್ದು ಸಿಹಿಯಾಗಿರುತ್ತದೆ. ಇದು ಹಲಸಿನ ಹಣ್ಣಿನ ಸೀಸನ್ ಆಗಿರುವುದರಿಂದ ಮಾರುಕಟ್ಟೆಗಳಲ್ಲಿ ಮತ್ತು ಬೀದಿಗಳಲ್ಲಿ ಕಡಿಮೆ ಬೆಲೆಗೆ ಹಲಸಿನ ಹಣ್ಣುಗಳನ್ನು ಮಾರಾಟ ಮಾಡುವುದನ್ನು ನೀವು ಕಾಣಬಹುದು.

ಹಲಸಿನ ಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್ಗಳು, ವಿಟಮಿನ್ಗಳು, ಖನಿಜಗಳು ಮತ್ತು ಫೈಟೊಕೆಮಿಕಲ್ಗಳು ಸಮೃದ್ಧವಾಗಿವೆ. ಹಾಗಾಗಿ ಹಲಸು ತಿನ್ನುವುದರಿಂದ ದೇಹಕ್ಕೆ ಹಲವಾರು ರೀತಿಯ ಲಾಭಗಳು ಸಿಗುತ್ತವೆ. ಈಗ ಹಲಸಿನ ಹಣ್ಣು ತಿನ್ನುವುದರಿಂದಾಗುವ ಪ್ರಯೋಜನಗಳೇನು ಎನ್ನುವುದನ್ನು ತಿಳಿಯೋಣ.
ಹಲಸಿನ ಹಣ್ಣಿನಲ್ಲಿ ಫ್ಲೇವನಾಯ್ಡ್ಗಳು ಮತ್ತು ಫೀನಾಲ್ಗಳಂತಹ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ಮುಕ್ತ ಆಮ್ಲಜನಕ ರಾಡಿಕಲ್ಗಳಿಂದ ಜೀವಕೋಶಗಳ ಡಿಎನ್ಎ ಹಾನಿಯನ್ನು ತಡೆಯುತ್ತದೆ. ಹಲಸಿನ ಹಣ್ಣಿನಲ್ಲಿ ಮುಖ್ಯವಾಗಿ ವಿಟಮಿನ್ ಎ ಸಮೃದ್ಧವಾಗಿದೆ. ಇದು ಕಣ್ಣಿನ ಆರೋಗ್ಯಕ್ಕೆ ಅವಶ್ಯಕವಾಗಿದೆ. ಆದ್ದರಿಂದ ಹಲಸಿನ ಹಣ್ಣನ್ನು ಸೇವಿಸುವುದರಿಂದ ದೃಷ್ಟಿ ಸಮಸ್ಯೆಗಳನ್ನು ತಡೆಯಬಹುದು.
ಹಲಸು ಫ್ರಕ್ಟೋಸ್ ಮತ್ತು ಸುಕ್ರೋಸ್ನಂತಹ ಕಾರ್ಬೋಹೈಡ್ರೇಟ್ಗಳನ್ನು ಹೊಂದಿರುತ್ತದೆ. ಇವು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತವೆ.
ಹಲಸಿನ ಹಣ್ಣಿನಲ್ಲಿ ನಾರಿನಂಶ ಮತ್ತು ನೀರಿನಂಶ ಅಧಿಕವಾಗಿದೆ. ಹೀಗಾಗಿ ಇದು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು ಜೀರ್ಣಾಂಗ ಕಾರ್ಯಯನ್ನು ಸುಧಾರಿಸುತ್ತದೆ. ಜೀರ್ಣಕ್ರಿಯೆ ಸಮಸ್ಯೆ ಇರುವವರು ಹಲಸಿನ ಹಣ್ಣನ್ನು ತಿನ್ನುವುದನ್ನು ರೂಢಿಸಿಕೊಂಡರೆ ಒಳ್ಳೆಯದು.
ಹಲಸಿನ ಹಣ್ಣಿನಲ್ಲಿ ಹೆಚ್ಚಿನ ಪೋಷಕಾಂಶಗಳಿವೆ. ಅವು ಥೈರಾಯ್ಡ್ ಗ್ರಂಥಿಯ ಕಾರ್ಯನಿರ್ವಹಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇದು ಥೈರಾಯ್ಡ್ ಹಾರ್ಮೋನ್ಗಳ ಸುಗಮ ಕಾರ್ಯನಿರ್ವಹಣೆ ಮತ್ತು ಉತ್ಪಾದನೆಗೆ ಸಹಾಯ ಮಾಡುತ್ತದೆ. ಹಾಗಾಗಿ ಹಲಸು ತಿನ್ನುವುದರಿಂದ ಥೈರಾಯ್ಡ್ ಸಮಸ್ಯೆ ತಡೆಯಬಹುದು.




