ಮಾವಿನಕಾಯಿ ಹಾಗೂ ಮಾವಿನ ಹಣ್ಣಿನ ಸೀಸನ್ ಶುರುವಾಗಿ ಬಿಟ್ಟದೆ. ಮಾರ್ಕೆಟ್‌ಗಳಲ್ಲಿ, ತಳ್ಳುವ ಗಾಡಿಗಳಲ್ಲಿ, ಸೂಪರ್ ಮಾರ್ಕೆಟ್ ಗಳಲ್ಲಿ ಹೀಗೆ ಎಲ್ಲಿ ನೋಡಿದರೂ ಕೂಡ ಮಾವಿನ ಹಣ್ಣಿನದ್ದೇ ಕಾರುಬಾರು! ಸಾಮಾನ್ಯವಾಗಿ ಯುಗಾದಿ ಹಬ್ಬ ಕಳೆದ ಬಳಿಕ ಮಾವಿನ ಹಣ್ಣುಗಳು ಭರಾಟೆ ಎಲ್ಲಾ ಕಡೆ ಪ್ರಾರಂಭವಾಗುತ್ತದೆ.
ಸಕ್ಕರೆಕಾಯಿಲೆ ಅಥವಾ ಮಧುಮೇಹ ಸಮಸ್ಯೆ ಒಮ್ಮೆ ಬಂದರೆ ಹೋಗುವ ಕಾಯಿಲೆ ಅಲ್ಲ ಹೀಗಾಗಿ, ಇದು ನಮ್ಮನ್ನು ಆವರಿಸುವ ಮುನ್ನ ಎಚ್ಚರಿಕೆ ತೆಗೆದುಕೊಳ್ಳುವುದು ಒಳ್ಳೆಯದು ಅಲ್ಲವೇ? ಇದಕ್ಕಾಗಿ ಕಟ್ಟುನಿಟ್ಟಾದ ಆಹಾರ ಪದ್ಧತಿ ಮತ್ತು ವ್ಯಾಯಾಮ ಇದಕ್ಕೆ ಪರಿಹಾರ ಎಂದು ಹೇಳಬಹುದು.ಇನ್ನು ಮಾವಿನ ಹಣ್ಣು ತಿನ್ನುವ ಆಸೆ, ಸಕ್ಕರೆ ಕಾಯಿಲೆ ಇರುವವರಿಗೆ ಇರುವುದಿಲ್ಲವೇ? ಆದ್ರೆ ಸಿಹಿ ಇರುವ ಈ ಹಣ್ಣನ್ನು ಮಧುಮೇಹಿಗಳು ತಿನ್ನಬಹುದೇ? ಇನ್ನು ಪ್ರಶ್ನೆ ಎಲ್ಲರಲ್ಲಿಯೂ ಕಾಡುತ್ತದೆ. ಆದರೆ ಆರೋಗ್ಯ ತಜ್ಞರು ಹೇಳು ವ ಪ್ರಕಾರ ಮಿತಿಯಲ್ಲಿ ಸೇವನೆ ಮಾಡಿದರೆ ಯಾವುದೇ ಅಡ್ಡ ಪರಿಣಾಮಗಳನ್ನು ಉಂಟು ಮಾಡದೆ ಇರುವ ಹಣ್ಣು ಗಳಲ್ಲ ಮಾವಿನ ಹಣ್ಣು ಕೂಡ ಒಂದು!
ಕಣ್ಣುಗಳು ನಮ್ಮ ದೇಹದ ಪ್ರಮುಖ ಅಂಗ. ಹೀಗಾಗಿ ಇವುಗಳ ಆರೋಗ್ಯವನ್ನು ಕಾಪಾಡಿಕೊಳ್ಳ ಬೇಕು ಎಂದರೆ ಸರಿಯಾದ ಆಹಾರಕ್ರಮ ಹಾಗೂ ಮಿತವಾಗಿ ಮಾವಿನಹಣ್ಣನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಬೇಕು. ಮುಖ್ಯ ವಾಗಿ ಕಣ್ಣಿನ ಆರೋಗ್ಯವನ್ನು ಕಾಪಾಡುವ ವಿಟಮಿನ್ ಎ ಹೇರಳವಾಗಿ ಕಂಡುಬರುವುದರಿಂದ ಇದು ಕಣ್ಣಿನ ದೃಷ್ಟಿಯನ್ನು ಸುಧಾರಿಸಲು ನೆರವಾಗುವ ಪರಿಪೂರ್ಣ ಹಣ್ಣು ಎಂದರೆ ತಪ್ಪಾಗಲಾರದು! ಅಷ್ಟೇ ಅಲ್ಲದೇ ಕೆಲವರಲ್ಲಿ ಕಂಡು ಬರುವ ರಾತ್ರಿ ಕುರುಡುತನ ಮತ್ತು ಕಣ್ಣುಗಳನ್ನು ಒಣಗಿಸುವಿಕೆ ಸಮಸ್ಯೆಯನ್ನು ಕೂಡ ತಡೆಯುತ್ತದೆ.
ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ಮೊಡವೆಗಳ ಸಮಸ್ಯೆ ಎಲ್ಲರಲ್ಲಿಯೂ ಕಂಡು ಬರುತ್ತದೆ. ಆದರೆ ಇದಕ್ಕೆಲ್ಲಾ ದುಬಾರಿ ಹಣ್ಣ ಕೊಟ್ಟು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಯುಕ್ತ ಕ್ರೀಮ್, ಬಳಸುವ ಬದಲು ಹಸಿ ಮಾವಿನಕಾಯಿ ಗಳನ್ನು ಬಳಸಿ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು