ಆನ್ಲೈನ್ ಗೇಮಿಂಗ್ ಕಂಪನಿ ಮೇಲೆ ED ದಾಳಿ ಮಾಡಿದೆ. ವಿನ್ನೋ ಗೇಮ್ಸ್ ಕ್ರಾಫ್ಟ್ ಕಂಪನಿಗಳ ಮೇಲೆ ED ಅಧಿಕಾರಿಗಳು ದಾಳಿ ಮಾಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರು, ದೆಹಲಿ ಹಾಗೂ ಗುರು ಗ್ರಾಮ ಸೇರಿದಂತೆ ಏಕಕಾಲಕ್ಕೆ ದಾಳಿ ಮಾಡಿ ED ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಈ ಕಂಪನಿಗಳ ಕಾರ್ಪೊರೇಟ್ ಕಚೇರಿ ಮತ್ತು ಸಿಇಒ ನಿವಾಸದ ಮೇಲೆ ED ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ದಾಳಿಯ ವೇಳೆ ಅಕ್ರಮವಾಗಿ ಹಣ ವರ್ಗಾವಣೆ ಆಗಿರುವುದು ಪತ್ತೆಯಾಗಿದೆ ಎಂದು ವರದಿಯಾಗಿದೆ.




