ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನಟರಾದ ಪ್ರಕಾಶ್ ರಾಜ್, ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ಲಕ್ಷ್ಮಿ ಮಂಚುಗೆ ED ಸಮನ್ಸ್ ಜಾರಿ ಮಾಡಿದೆ.
ಆನ್‌ಲೈನ್ ಜೂಜಾಟದ ಆಟಗಳಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಕುರಿತು ED ತನಿಖೆ ನಡೆಸುತ್ತಿದೆ. ಅಧಿಕಾರಿಗಳ ಪ್ರಕಾರ, ಈ ಪ್ರಕರಣದಲ್ಲಿ ರಾಣಾಗೆ ಜುಲೈ 23, ಪ್ರಕಾಶ್ ರಾಜ್‌ಗೆ ಜುಲೈ 30, ವಿಜಯ್ ದೇವರಕೊಂಡಗೆ ಆಗಸ್ಟ್ 6, ಮತ್ತು ಲಕ್ಷ್ಮಿ ಮಂಚುಗೆ ಆಗಸ್ಟ್ 13 ರಂದು ಹಾಜರಾಗುವಂತೆ ED ಆದೇಶಿಸಿದೆ.