ತಿರುವನಂತಪುರ: ಅಂಗನವಾಡಿ ಕೇಂದ್ರಗಳ ಊಟದ ಮೆನುವಿನಲ್ಲಿ ಮೊಟ್ಟೆ ಬಿರಿಯಾನಿ ಸೇರಿಸಲು ಕೇರಳ ಸರಕಾರ ನಿರ್ಧರಿಸಿದೆ.

‘ಉಪ್ಪಿಟ್ಟುಬೇಡ, ಮೊಟ್ಟೆ ಬಿರಿಯಾನಿ ಬೇಕು’ ಎಂದು ಮಗುವೊಂದು ತಾಯಿಗೆ ಕೇಳಿದ ವೀಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ನಿರ್ಧಾರ ಕೈಗೊಂಡಿರುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಪ್ರಸ್ತುತ ಕೇರಳದ ಅಂಗನವಾಡಿಗಳಲ್ಲಿ ವಾರಕ್ಕೆ 2 ದಿನ ಮೊಟ್ಟೆ ನೀಡಲಾಗುತ್ತಿದೆ.




