ಮಂಗಲ್ಪಾಡಿ ಏಕಾಹ ಭಜನಾ ಮಂದಿರದಲ್ಲಿ ಏಕಾಹ ಭಜನಾ ವಜ್ರಮಹೋತ್ಸವ

Share with

ಉಪ್ಪಳ: ಮಂಗಲ್ಪಾಡಿ ಏಕಾಹ ಭಜನಾ ಮಂದಿರದಲ್ಲಿ ಏಕಾಹ ಭಜನಾ ವಜ್ರ ಮಹೋತ್ಸವ ನ.4ರಿಂದ 13ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. 4ರಂದು ನೇಪಾಳದ ಪಶುಪತಿ ಕ್ಷೇತ್ರದ ನಿವೃತ ಅರ್ಚಕರಾದ ಪದ್ಯಾಣ ರಘುರಾಮ ಕಾರಂತ ರವರಿಂದ ದೀಪ ಪ್ರಜ್ವಲನೆ, ಸಂಜೆ 6.30ರಿಂದ ರಾತ್ರಿ 8.30ರ ತನಕ ಭಜನೆ,  ಇದೇ ರೀತಿ 5-1-2024 ರಿಂದ 10-11-2024 ರತನಕ  ಸಂಜೆ 6.30ರಿಂದ ರಾತ್ರಿ  8.30ರ ತನಕ ವಿವಿಧ ತಂಡಗಳಿoದ ಭಜನೆ ನಡೆಯಲಿದೆ. 11ರಂದು ಮಧ್ಯಾಹ್ನ 2ರಿಂದ ಗೀತಾ ಕಂಠಪಾಠ ಸ್ಪರ್ಧೆ, ಸಂಜೆ 6ರಿಂದ ಶ್ರೀ ಸತ್ಯನಾರಾಯಣ ಪೂಜೆ, ಸಂಜೆ 7.30ರಿಂದ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ  ನಡೆಯುವ ಧಾರ್ಮಿಕ ಸಭೆಯಲ್ಲಿ ಸಮಿತಿ ಅಧ್ಯಕ್ಷ ಸುರೇಶ್.ವಿ ಶೆಟ್ಟಿ ಪರಂಕಿಲ ಅಧ್ಯಕ್ಷತೆ ವಹಿಸುರು. ಧಾರ್ಮಿಕ ಮುಂದಾಳು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಏಕಾಹ ಭಜನಾ ಮಂದಿರ ಸಮಿತಿ ವಿಶ್ವಸ್ಥ ಮಂಡಳಿ ಅಧ್ಯಕ್ಷ ಡಾ.ಶ್ರೀಧರ ಭಟ್, ಉದ್ಯಮಿ ಪ್ರವೀಣ್ ಆರಿಕ್ಕಾಡಿ, ದೀಟಿಗೆ ಸಿನಿಮಾ ನಿರ್ಧೇಶಕ ಸಂತೋಷ್ ಮಾಡ, ಮಾಡ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದ ಮಾಜಿ ಮೊಕ್ತೆಸರ ಮೋಹನ್ ಯು.ಎಸ್.ಶೆಟ್ಟಿ ತೂಮಿನಾಡು,  ವಿಶ್ವಹಿಂದೂ ಪರಿಷತ್ ಮಾತೃಶಕ್ತಿ ಕಣ್ಣೂರು ವಿಭಾಗ ಪ್ರಮುಖ್  ಮೀರಾ ಆಳ್ವಾ, ಜಯಲಕ್ಷ್ಮಿ ಶಿವಶಂಕರ, ವಿ.ಎಚ್.ಪಿ ಮಂಜೇಶ್ವರ ಪ್ರಖಂಡ ಅಧ್ಯಕ್ಷ ಕೃಷ್ಣ ಶಿವಕೃಪಾ ಕುಂಜತ್ತೂರು, ಉದ್ಯಮಿ ಲಕ್ಷ್ಮಣ ಭಕ್ತ ಮಂಜೇಶ್ವರ, ಗಣೇಶ್ ಕೋಡಿಬೈಲು ಮಂಗಳೂರು, ರವಿನಾರಾಯಣ ಗುಣಾಜೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿರುವರು.  ಈ ಸಂದರ್ಭದಲ್ಲಿ ಮಂದಿರದ ಟ್ರಸ್ಟ್ನ ಹಿರಿಯರಾದ ಲಿಂಗಪ್ಪ ಶೆಟ್ತಿಗಾರ್ ಇವರ “ ಏಳು ಬೀಳಿನ ಬಾಳು” ಎಂಬ ಕೃತಿ ಲೋಕಾರ್ಪಣೆಗೊಳ್ಳಲಿದೆ. ರಾತ್ರಿ 8.30ರಿಂದ ಸಮೂಹ ನೃತ್ಯ ಸ್ಪರ್ಧೆ, 12ರಂದು ಬೆಳಿಗ್ಗೆ 5ಕ್ಕೆ ಗಣಹೋಮ, ಬೆಳಿಗ್ಗೆ 6.33ಕ್ಕೆ ದೀಪ ಪ್ರತಿಷ್ಟೆ ಭಜನೆ ಪ್ರಾರಂಭ, ರಾತ್ರಿ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, 13ರಂದು ಸೂರ್ಯೋದಯಕ್ಕೆ ಮಂಗಳಾಚರಣೆ, ಪ್ರಸಾದ ವಿತರಣೆ ನಡೆಯಲಿದೆ.


Share with

Leave a Reply

Your email address will not be published. Required fields are marked *