ಸುಳ್ಯ: ಮನೆಯೊಂದರ ಶೆಡ್ಗೆ ಬೆಂಕಿ ತಗುಲಿ ಸುಮಾರು ಮೂರು ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾದ ಘಟನೆ ಮಂಡೆಕೋಲು ಗ್ರಾಮದ ಕಾಡುಸೊರಂಜ ಎಂಬಲ್ಲಿ ಡಿ.23ರಂದು ಸಂಜೆ ನಡೆದಿದೆ.
ಕಾಡುಸೊರಂಜ ನಿವಾಸಿ ಕರುಣಾಕರ ಎಂಬುವವರ ಮನೆ ಪಕ್ಕದ ಶೆಡ್ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿದ್ದು, ಶೆಡ್ನಲ್ಲಿದ್ದ ರಬ್ಬರ್ ಶೀಟ್ಗಳು, ತೆಂಗಿನಕಾಯಿ, ಅಡಿಕೆ ಮತ್ತಿತರ ವಸ್ತುಗಳು ಸುಟ್ಟು ಬೂದಿಯಾಗಿವೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ನೆರವಿನಿಂದ ಬೆಂಕಿಯನ್ನು ನಂದಿಸಿದ್ದಾರೆ ಎಂದು ತಿಳಿದು ಬಂದಿದೆ.