ಉಡುಪಿ: ಕವಿ ಮುದ್ದಣ ಮಾರ್ಗದ, ರಸ್ತೆ ವಿಭಜಕ ದಂಡೆಯ ಉದ್ದಕ್ಕೂ ಇರುವ ರಸ್ತೆ ದೀಪ ಕಂಬಗಳ ಕೆಳಗೆ ವಿದ್ಯುತ್ ಸರಬರಾಜು ನಿಯಂತ್ರಣ ಪೆಟ್ಟಿಗೆಗಳಿದ್ದು, ಅವುಗಳು ಸುರಕ್ಷಿತ ಸ್ಥಿತಿಯಲ್ಲಿಲ್ಲದೆ ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ವಿದ್ಯುತ್ ನಿಯಂತ್ರಣದ ಪೆಟ್ಟಿಗೆಗಳು ಬಾಗಿಲು ತೆರವುಕೊಂಡಿವೆ.
ಕೆಲವು ಕಡೆಗಳಲ್ಲಿ ಪೆಟ್ಟಿಗೆಗಳು ಬೇರ್ಪಟ್ಟಿವೆ. ದ್ವಿಚಕ್ರ ವಾಹನ ಸವಾರರಿಗೆ ಸಂಚರಿಸುವಾಗ ತಾಗುವ ಸಂದರ್ಭವೂ ಇದೆ. ಮಕ್ಕಳು ಸ್ಪರ್ಶಿಸುವ ಸಾಧ್ಯತೆಯೂ ಇದೆ. ತಕ್ಷಣ ಸಂಬಂಧಪಟ್ಟವರು ಪರಿಶೀಲಿಸಿ ದುರಸ್ತಿಪಡಿಸುವಂತೆ ಸಮಾಜಸೇವಕ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ.