ರಂಧ್ರದಲ್ಲಿ ಸಿಲುಕಿದ್ದ ಕಲ್ಲಂಗಡಿ ಹಣ್ಣನ್ನು ಬುದ್ಧಿವಂತಿಕೆಯಿಂದ ಹೊರ ತೆಗೆದ ಆನೆ

Share with

ಬದುಕಿನಲ್ಲಿ ಏನೇ ಸಮಸ್ಯೆಗಳು ಬರಲಿ, ಅದಕ್ಕೆ ಪರಿಹಾರ ಕಂಡು ಕೊಳ್ಳುವುದು ಬಹಳ ಮುಖ್ಯ. ಪ್ರಾಣಿಗಳ ಕೆಲ ವಿಡಿಯೋಗಳು ಇದಕ್ಕೆ ಉದಾಹರಣೆಯಂತಿರುತ್ತವೆ. ಈ ವಿಡಿಯೋ ನೋಡಿದ ಮೇಲೆ ನಿಮಗೆ ಮಾತು ಸತ್ಯ ಎನಿಸದೇ ಇರದು. ಆನೆಯೊಂದು (elephant) ರಂಧ್ರದಲ್ಲಿ ಸಿಲುಕಿದ್ದ ಕಲ್ಲಂಗಡಿ ಹಣ್ಣನ್ನು ಬಹಳ ಬುದ್ಧಿವಂತಿಕೆಯನ್ನು ತೆಗೆಯುವ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿದ ನೆಟ್ಟಿಗರು ಆನೆಯ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡಿದ್ದಾರೆ.

ಲೆಕ್ ಚೈಲರ್ಟ್ (lek chailert) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಆನೆಯೊಂದು ರಂಧ್ರದಲ್ಲಿ ಸಿಲುಕಿ ಕೊಂಡಿರುವ ಕಲ್ಲಂಗಡಿ ಹಣ್ಣನ್ನು ಹೊರ ತೆಗೆಯಲು ಹರಸಾಹಸ ಪಡುತ್ತಿರುವ ದೃಶ್ಯವನ್ನು ಕಾಣಬಹುದು. ಸೊಂಡಿಲನ್ನು ಬಳಸಿ ಕಲ್ಲಂಗಡಿ ಹಣ್ಣನ್ನು ತೆಗೆಯಲು ಪ್ರಯತ್ನಿಸಿದ್ದು ಕೊನೆಗೆ ಈ ಪ್ರಯತ್ನದಲ್ಲಿ ಗೆದ್ದಿದೆ. ಹೊರತೆಗೆದ ಕಲ್ಲಂಗಡಿ ಹಣ್ಣನ್ನು ಬಾಯಿ ಚಪ್ಪರಿಸಿಕೊಂಡು ತಿಂದ ಆನೆಯನ್ನು ನೀವಿಲ್ಲಿ ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ



ಈ ವಿಡಿಯೋ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಬಹಳ ಬುದ್ಧಿವಂತ ಆನೆ ಎಂದಿದ್ದಾರೆ. ಮತ್ತೊಬ್ಬರು, ಸೃಷ್ಟಿಯಲ್ಲಿ ಅತ್ಯಂತ ಬುದ್ಧಿವಂತ ಪ್ರಾಣಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಅತಂತ್ಯ ಶಕ್ತಿಶಾಲಿ ಸೊಂಡಿಲು ಎಂದು ಹೇಳಿದ್ದಾರೆ.


Share with

Leave a Reply

Your email address will not be published. Required fields are marked *