ಸಾಮಾಜಿಕ ಹೋರಾಟಗಾರ, ಮಲೆಕುಡಿಯ ಸಂಘದ ಸ್ಥಾಪಕ ಸದಸ್ಯರಾಗಿ, ಜಿಲ್ಲೆ ಹಾಗೂ ರಾಜ್ಯ ಸಂಘಟನೆಯಲ್ಲಿ ಪ್ರಮುಖರಾಗಿದ್ದ ಎಲ್ಯಣ್ಣ ಮಲೆಕುಡಿಯ (60ವ) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.


ಬೆಳ್ತಂಗಡಿ ತಾಲೂಕು ಮಲೆಕುಡಿಯರ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಎಲ್ಯಣ್ಣ ಮಲೆಕುಡಿಯ ಅವರು ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟಿನ ಸಲಹೆಗಾರರೂ ಆಗಿದ್ದರು.




