Emergency Land: ಆಗಸದಲ್ಲಿ ಮತ್ತೆ ತಲ್ಲಣ: 4 ವಿಮಾನ ಒಂದೇ ದಿನ ತುರ್ತು ಭೂಸ್ಪರ್ಶ

Share with

ಮುಂಬಯಿ: ಅಹ್ಮದಾಬಾದ್ ವಿಮಾನ ದುರಂತದ
ಬೆನ್ನಲ್ಲೇ ಹಲವೆಡೆ ವಿಮಾನಗಳಲ್ಲಿ ಬೇರೆ ಬೇರೆ ರೀತಿಯ ಸಮಸ್ಯೆಗಳು ತಲೆದೋರಿದ್ದು, ಆತಂಕ ಸೃಷ್ಟಿಸಿದೆ. ಸೋಮವಾರ ಒಂದೇ ದಿನ ಇಂತಹ 4 ಪ್ರಕರಣಗಳು ವರದಿಯಾಗಿವೆ.

ಹಾಂಕಾಂಗ್‌ನಿಂದ ದಿಲ್ಲಿಗೆ ಬರುತ್ತಿದ್ದ ಏ‌ರ್ ಇಂಡಿಯಾ ಡೀಮ್‌ಲೈನ‌ರ್ ವಿಮಾನದಲ್ಲಿ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಅದು ಗೊತ್ತಾದ ಕೂಡಲೇ ಪೈಲಟ್ ಹಾಂಕಾಂಗ್ ಎಟಿಸಿಯನ್ನು ಸಂಪರ್ಕಿಸಿದ್ದು, ಮತ್ತೆ ಹಾಂಕಾಂಗ್ ವಿಮಾನ ನಿಲ್ದಾಣಕ್ಕೆ ಮರಳಿ ತುರ್ತು ಭೂಸ್ಪರ್ಶ ಮಾಡಿದೆ.

242 ಹಜ್ ಯಾತ್ರಿಕರನ್ನು ಜೆಡ್ಡಾದಿಂದ ಲಕ್ಷೆಗೆ ಕರೆತಂದ ಸೌದಿ ಏರ್‌ಲೈನ್ಸ್‌ನ ವಿಮಾನ ಇಳಿಯುವ ವೇಳೆ ಅದರ ಚಕ್ರದಲ್ಲಿ ಹೊಗೆ ಕಾಣಿಸಿಕೊಂಡಿದೆ. ಹೀಗಾಗಿ ಸ್ವಲ್ಪಕಾಲ ಆತಂಕ ಸೃಷ್ಟಿಯಾಗಿದೆ. ಕೊನೆಗೆ ಎಲ್ಲರನ್ನೂ ಸುರಕ್ಷಿತವಾಗಿ ವಿಮಾನದಿಂದ ಇಳಿಸಲಾಗಿದೆ.

ಕರೆತಂದ ಸೌದಿ ಏರ್‌ಲೈನ್ಸ್‌ನ ವಿಮಾನ ಇಳಿಯುವ ವೇಳೆ ಅದರ ಚಕ್ರದಲ್ಲಿ ಹೊಗೆ ಕಾಣಿಸಿಕೊಂಡಿದೆ. ಹೀಗಾಗಿ ಸ್ವಲ್ಪಕಾಲ ಆತಂಕ ಸೃಷ್ಟಿಯಾಗಿದೆ. ಕೊನೆಗೆ ಎಲ್ಲರನ್ನೂ ಸುರಕ್ಷಿತವಾಗಿ ವಿಮಾನದಿಂದ ಇಳಿಸಲಾಗಿದೆ.

ದಿಲ್ಲಿಯಿಂದ ರಾಂಚಿಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲೂ ತಾಂತ್ರಿಕ ಸಮಸ್ಯೆ ಎದುರಾಗಿದೆ. ಬಳಿಕ ವಿಮಾನವು ದಿಲ್ಲಿಗೆ ಮರಳಿದ್ದು, ಅಲ್ಲಿ ಪರಿಶೀಲನೆ ನಡೆಸಲಾಗಿದೆ. ಫ್ರಾಂಕ್‌ಫರ್ಟ್‌ನಿಂದ ಹೈದರಾಬಾದ್‌ಗೆ ಹೊರಟಿದ್ದ ಲುಫ್ತಾನ್ನಾ ವಿಮಾನಕ್ಕೆ ರವಿವಾರ ಬಾಂಬ್ ಬೆದರಿಕೆ ಕರೆ ಬಂದಿದೆ. ಈ ಹಿನ್ನೆಲೆಯಲ್ಲಿ ಬಲ್ಲೇರಿಯಾ ವಾಯುಪ್ರದೇಶ ತಲುಪಿದ್ದ ವಿಮಾನವು ವಾಪಸ್ ಫ್ರಾಂಕ್‌ ಫರ್ಟ್‌ಗೆ ಮರಳಿದೆ.


Share with

Leave a Reply

Your email address will not be published. Required fields are marked *