ಕೆಲಸಕ್ಕೆ ಸೇರಿದ ಮೊದಲೇ ದಿನವೇ ವಜಾ ಆದ ಉದ್ಯೋಗಿ

Share with

ಸಂಬಳ ಕಡಿಮೆಯಿರಲಿ, ಓದಿಗೆ ತಕ್ಕ ಉದ್ಯೋಗ (job) ಇರಬೇಕು. ಆದರೆ ಕೆಲಸ ಸಿಕ್ಕ ಮೊದಲ ದಿನವೇ ನಿಮ್ಮ ಕೆಲಸ ಹೋದರೆ ಹೇಗಿರಬಹುದು. ಒಮ್ಮೆಯಾದ್ರೂ ಇಂತಹ ಪರಿಸ್ಥಿತಿ ಎದುರಾದ್ರೆ ಹೇಗಿರಬಹುದು ಎಂದು ನೀವು ಊಹಿಸಿದ್ದೀರಾ. ಒಂದು ವೇಳೆ ಕಂಪನಿಯೂ ಉದ್ಯೋಗಿಯನ್ನು ಕೆಲಸದಿಂದ ತೆಗೆದು ಹಾಕಲು ಕಾರಣವೇ ಕೆಲಸ ಸರಿಯಾಗಿ ಮಾಡದೇ ಇರುವುದೇ ಆಗಿರುತ್ತದೆ. ಆದರೆ ಈ ಉದ್ಯೋಗಿ ವಿಚಾರದಲ್ಲಿ ಹಾಗೆ ಆಗಿಲ್ಲ. ಕೆಲಸಕ್ಕೆ ಸೇರಿದ ಮೊದಲ ದಿನವೇ ಕಾಫಿ ಬೀಜಗಳನ್ನು (coffee beans) ಕದ್ದಿದ್ದು ಕಂಪನಿಯೂ ಹಿಂದೆ ಮುಂದೆ ನೋಡದೇ ಉದ್ಯೋಗಿಯನ್ನು ಕೆಲಸದಿಂದ ತೆಗೆದುಹಾಕಿದೆ. ಹೌದು, ಮೊದಲ ದಿನವೇ ವಜಾಗೊಳಿಸಲ್ಪಟ್ಟ ಉದ್ಯೋಗಿಗೆ ಸಂಬಂಧಪಟ್ಟ ಸ್ಟೋರಿ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದೆ.

ಕೆಲಸಕ್ಕೆ ಸೇರಿದ ಮೋದಲೇ ದಿನವೇ ಜಾಬ್‌ ಕಳೆದುಕೊಂಡ ಉದ್ಯೋಗಿ
r/ coworkerstories ಹೆಸರಿನ ರೆಡ್ಡಿಟ್ ಖಾತೆಯಲ್ಲಿ ವ್ಯಕ್ತಿಯೊಬ್ಬರು ತಮ್ಮ ಕಂಪನಿಗೆ ಸೇರಿದ ಉದ್ಯೋಗಿಯನ್ನು ಮೊದಲ ದಿನವೇ ಕೆಲಸದಿಂದ ವಜಾಗೊಳಿಸಲಾಯಿತು ಎನ್ನುವ ಅಚ್ಚರಿಕಾರಿ ಘಟನೆಯನ್ನು ಬಹಿರಂಗಪಡಿಸಿದ್ದಾರೆ. ಈ ಪೋಸ್ಟ್‌ನಲ್ಲಿ ಈ ಘಟನೆ ನಿಜಕ್ಕೂ ನನಗೆ ಅಚ್ಚರಿಯೆನಿಸಿತು. ನಮ್ಮ ಕಂಪನಿಯಲ್ಲಿ ಒಬ್ಬ ಮಹಿಳೆಯನ್ನು ಉದ್ಯೋಗಕ್ಕೆಂದು ನೇಮಕಮಾಡಿಕೊಂಡಿದ್ದೆವು. ಆಕೆಯ ಮೊದಲ ದಿನದ ಬೆಳಗಿನ ತರಬೇತಿ ಪ್ರಕ್ರಿಯೆಯಲ್ಲಿ ತುಂಬಾ ಕಠಿಣ ಎಂದೆನಿಸಿತು. ಆದರೆ  ಆ ಬಳಿಕ ನಿಭಾಯಿಸಲು ಏನೂ ಕಷ್ಟಕರವಾಗಿರಲಿಲ್ಲ. ಆದರೆ ಈ ವಿರಾಮದ ಸಮಯದಲ್ಲಿ ಆಕೆ ಕಾಫಿ ಮೇಕರ್‌ ಪಕ್ಕದಲ್ಲಿದ್ದ ಎರಡು ದೊಡ್ಡ ಚೀಲಗಳ ಸ್ಟಾರ್‌ ಬಾಕ್ಸ್‌ ಕಾಫಿಬೀಜಗಳತ್ತತೋರಿಸಿ ಇವು ಯಾರವು ಎಂದು ಅಲ್ಲಿದ್ದ ಎಲ್ಲರ ಬಳಿ ಕೇಳಿದಳು.

ಆ ವೇಳೆ ಅಲ್ಲೇ ಇದ್ದ ಒಬ್ಬ ವ್ಯಕ್ತಿ ಇದು ಕಂಪನಿಯದು, ಇದನ್ನು ಯಾರು ಬೇಕಾದರೂ ತೆಗೆದುಕೊಳ್ಳಬಹುದು ಎಂದಿದ್ದಾರೆ. ಅದಕ್ಕೆ ಉದ್ಯೋಗಿ ಹೌದಾ ಎಂದು ಹೇಳಿ ಸುಮ್ಮನಾಗಿದ್ದಾಳೆ. ಈ ಕಾಫಿ ಬೀಜಗಳನ್ನು ಯಾರು ಬೇಕಾದರೂ ತೆಗೆದುಕೊಳ್ಳಬಹುದು ಎನ್ನುವುದ್ದನ್ನೇ ಪ್ಲಸ್ ಪಾಯಿಂಟ್ ಆಗಿ ತೆಗೆದುಕೊಂಡಿದ್ದಾಳೆ. ಹೀಗಾಗಿ ಆಕೆಯೂ ಮನೆಗೆ ಹೋಗುವಾಗ ಆ ಕಾಫಿಬೀಜಗಳಿರುವ ಎರಡು ದೊಡ್ಡ ಚೀಲಗಳನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾಳೆ. ಈ ಮಹಿಳೆ ಮಾಡಿದ ಈ ಕೆಲಸದಿಂದಾಗಿ ಕಂಪನಿಯ ಉದ್ಯೋಗಿಗಳಿಗೆ ಕಾಫಿಯೇ ಇಲ್ಲದಂತಾಗಿದೆ. ಮರುದಿನ ಆಕೆ ಕೆಲಸಕ್ಕೆ ಬಂದಾಗ ಮ್ಯಾನೇಜರ್‌ ಕಚೇರಿಗೆ ತೆರಳಿದ್ದು, ಆದಾದ ಹತ್ತೇ ಹತ್ತು ನಿಮಿಷಕ್ಕೆ ಮನೆಗೆ ಹೋಗಿದ್ದಾಳೆ ಎಂದು ಬರೆದುಕೊಂಡಿದ್ದಾರೆ.


Share with

Leave a Reply

Your email address will not be published. Required fields are marked *