ಪರಿಸರ ದಿನಾಚರಣೆಯು ಕೇವಲ ಒಂದು ಕಾರ್ಯಕ್ರಮಕ್ಕೆ ಸಿಮಿತವಾಗದೆ

Share with

ಪರಿಸರ ದಿನಾಚರಣೆ ಕಾರ್ಯಕ್ರಮ ಮಾಡುವ ಮೂಲಕ ಪರಿಸರವನ್ನು ಉಳಿಸಿ,ಬೆಳೆಸುವಂತ ಕೆಲಸವಾಗಬೇಕು. ಇಂತಹ ಕಾರ್ಯಕ್ರಮ ಕೇವಲ ಒಂದು ದಿನಕ್ಕೆ ಸಿಮಿತವಾಗದೆ ಪ್ರತಿದಿನವು ಪರಿಸರವನ್ನು ಪೋಷಿಸುವಂತ ಕೆಲಸ ಆಗಬೇಕು.ಜಗದ ಪ್ರತಿಯೊಬ್ಬನಿಗೂ ಪರಿಸರ ಅತ್ಯಮೂಲ್ಯ ಮತ್ತು ಅತ್ಯಗತ್ಯ. ಪ್ರಕೃತಿಯಿಂದ ನಮಗೆ ಉಪಯೋಗವಿದೆ,ಗಾಳಿ,ನೆರಳು, ಹೀಗೆ ವಿವಿಧ ರೀತಿಯಲ್ಲಿ ಪರಿಸರವು ನಮಗೆ ಸಹಕಾರಿಯಾಗಿದೆ ಎಂದು ಬಂಟ್ವಾಳದ ವಲಯ ಅರಣ್ಯಾಧಿಕಾರಿಯಾದ ಪ್ರಫುಲ್ ಶೆಟ್ಟಿ ಹೇಳಿದರು.

ಅವರು ದಿನಾಂಕ 09-06-2024ರ ಆದಿತ್ಯವಾರದಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,ಪೆರಾಜೆ ಇಲ್ಲಿ ಯುವವಾಹಿನಿ(ರಿ.) ಮಾಣಿ ಘಟಕ ಆತಿಥ್ಯದಲ್ಲಿ ಕರ್ನಾಟಕ ಅರಣ್ಯ ಇಲಾಖೆ ಬಂಟ್ವಾಳ ವಲಯ,ಮಂಗಳೂರು ವಿಭಾಗ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಡೆದ “ಹಸಿರು ವನ — ಸಂತೃಪ್ತ ಮನ” ಹಾಗೂ “ಉಚಿತ ಪುಸ್ತಕ ವಿತರಣಾ” ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದರು.

ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮೋನಪ್ಪ ಸಾಲ್ಯಾನ್ ರವರು ಕಾರ್ಯಕ್ರಮದ ಉದ್ಘಾಟಿಸಿ ಶುಭಹಾರೈಸಿದರು.ಘಟಕದ ಗೌರವ ಸಲಹೆಗಾರರಾದ ನಾರಾಯಣ ಸಾಲ್ಯನ್ ರವರು ಅತಿಥಿಗಳಾಗಿ ಭಾಗವಹಿಸಿ ಪರಿಸರವನ್ನು ಉಳಿಸಿ ಬೆಳೆಸುವಂತ ಕರ್ತವ್ಯ ನಮ್ಮ ಮೇಲಿದೆ, ಎಲ್ಲರು ಒಟ್ಟುಗೂಡಿ ಪರಿಸರವನ್ನು ಸಂರಕ್ಷಿಸುವ ಎಂದು ಹೇಳಿದರು. ತದನಂತರ ಶಾಲೆಯ ಒಂದನೇ ತರಗತಿಯಿಂದ ಏಳನೆ ತರಗತಿಯವರೆಗಿನ ಮಕ್ಕಳಿಗೆ ಉಚಿತವಾಗಿ ಘಟಕದ ವತಿಯಿಂದ ಪುಸ್ತಕ ವಿತರಿಸಲಾಯಿತು ಹಾಗೂ ಮಕ್ಕಳಿಗೆ ಮತ್ತು ಮಕ್ಕಳ ಪೋಷಕರಿಗೆ ಗಿಡ ನೀಡಲಾಯಿತು. ಘಟಕದ ಅಧ್ಯಕ್ಷರಾದ ನಾಗೇಶ್ ಪೂಜಾರಿ ಕೊಂಕಣಪದವು ರವರು ಕಾರ್ಯಕ್ರಮಕ್ಕೆ ಸಹಕರಿಸಿದ ಶಾಲಾಭಿವೃದ್ಧಿ ಸಮಿತಿಗೆ,ಶಾಲಾ ಮುಖ್ಯ ಶಿಕ್ಷಕರಿಗೆ ಹಾಗೂ ಎಲ್ಲ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಬಂಟ್ವಾಳ ಉಪವಲಯ ಅರಣ್ಯಾಧಿಕಾರಿ ರವಿರಾಜ್ ಬಿ, ಪೆರಾಜೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಕುಶಾಲಪ್ಪ ಎಂ ಪೆರಾಜೆ,ಘಟಕದ ಸಮಾಜ ಸೇವಾ ನಿರ್ದೇಶಕರಾದ ಸತೀಶ್ ಬಾಬಣಕಟ್ಟೆ ಉಪಸ್ಥಿತರಿದ್ದರು.

ಅತಿಥಿಗಳ ಮುಖೇನ ಶಾಲಾ ವಠಾರದಲ್ಲಿ ಗಿಡವನ್ನು ನೆಡಲಾಯಿತು.ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು,ಶಿಕ್ಷಕಿಯರು, ಮಕ್ಕಳ ಪೋಷಕರು,ಘಟಕದ ಮಾಜಿ ಅಧ್ಯಕ್ಷರುಗಳು,ನಿರ್ದೇಶಕರು,ಸದಸ್ಯರು ಪಾಲ್ಗೊಂಡಿದ್ದರು.

ಕಾರ್ಯಕ್ರಮವನ್ನು ಘಟಕದ ಸದಸ್ಯೆಯಾದ ಪ್ರಜ್ಞಾ ಎಂ ಪ್ರಾರ್ಥಿಸಿದರು,ಶಾಲೆಯ ಮುಖ್ಯಾ ಶಿಕ್ಷಕಿಯಾದ ಯಶೋಧ ರವರು ಸ್ವಾಗತಿಸಿದರು,ಘಟಕದ ಕಾರ್ಯದರ್ಶಿಯಾದ ಶಾಲಿನಿ ಜಗದೀಶ್ ರವರು ವಂದಿಸಿದರು,ಮಾಜಿ ಕಾರ್ಯದರ್ಶಿಯಾದ ಸಚಿನ್ ಪೆರಾಜೆ ರವರು ಕಾರ್ಯಕ್ರಮವನ್ನು ನಿರೂಪಿಸಿದರು.


Share with

Leave a Reply

Your email address will not be published. Required fields are marked *