20 ಅಡಿ ದೂರದಲ್ಲೇ CCTV ಇದ್ರೂ ಸ್ಫೋಟದ ದೃಶ್ಯ ಸೆರೆಯಾಗಿಲ್ಲ!

Share with

ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗದ ಜಯಮಾರ್ತಾಂಡ ದ್ವಾರದ ಬಳಿ ನಡೆದ ಸಿಲಿಂಡರ್‌ ಸ್ಫೋಟ ಪ್ರಕರಣದಿಂದ ಅರಮನೆಯ ಭದ್ರತಾ ವೈಫಲ್ಯ ಬಟಾಬಯಲಾಗಿದೆ. ಮೈಸೂರು ಅರಮನೆಗೆ ವರ್ಷದಿಂದ ವರ್ಷಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.

ಹೀಗಾಗಿ ಅರಮನೆಯ ಆವರಣ ಮತ್ತು ಸುತ್ತಮುತ್ತಲಿನ ರಸ್ತೆಯಲ್ಲಿ ಸಿಸಿಟಿವಿ ಹಾಕಲಾಗಿದೆ. ಅದರಲ್ಲೂ ಸ್ಫೋಟ ಸಂಭವಿಸಿದ ಜಾಗದ ಸುಮಾರು 20 ಅಡಿ ದೂರದಲ್ಲಿ 360 ಡಿಗ್ರಿ ಸಿಸಿಟಿವಿಯನ್ನು ಹಾಕಲಾಗಿದೆ. ಆದರೆ ಈ ಸಿಸಿಟಿವಿಯಲ್ಲಿ ಸ್ಫೋಟದ ದೃಶ್ಯ ಸೆರೆಯಾಗಿಲ್ಲ.


Share with

Leave a Reply

Your email address will not be published. Required fields are marked *