ಲಕ್ಷ ಲಕ್ಷ ಜನ ಸೇರಿದ್ದರೂ ಎರಡೇ ಆ್ಯಂಬುಲೆನ್ಸ್..!!

Share with

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತ-ಮುತ್ತಲೂ ಲಕ್ಷಾಂತರ ಮಂದಿ ಆರ್ ಸಿಬಿ ಅಭಿಮಾನಿಗಳು ಏಕಕಾಲಕ್ಕೆ ಸೇರಿದ್ದರು. ಆದರೆ, ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರವು ಕೇವಲ 2 ಆ್ಯಂಬುಲೆನ್ಸ್‌ಗಳನ್ನು ಮಾತ್ರ ನಿಯೋಜಿಸಿತ್ತು. ಇನ್ನು ವಿಧಾನಸೌಧದ ಬಳಿಯೂ ಆ್ಯಂಬುಲೆನ್ಸ್‌ಗಳು ಇರಲಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

ದುರ್ಘಟನೆ ನಂತರ ಒಂದಾದ ಮೇಲೊಂದರಂತೆ ಆ್ಯಂಬುಲೆನ್ಸ್‌ಗಳು ಬರಲಾರಂಭಿಸಿದವು. ಕೆಲ ಹೊತ್ತಿನ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಲೂ ಆಂಬುಲೆನ್ಸ್ ಸದ್ದುಗಳೇ ಕಿವಿಗಡಚ್ಚುವಂತಿತ್ತು. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಲಕ್ಷಾಂತರ ಆರ್ ಸಿಬಿ ಅಭಿಮಾನಿಗಳು ಬರುವ ನಿರೀಕ್ಷೆಯಿದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ ಕನಿಷ್ಠ ಆ್ಯಂಬುಲೆನ್ಸ್ ಗಳನ್ನೂ ನಿಯೋಜಿಸಿಲ್ಲ ಎಂಬ ಗಂಭೀರವಾದ ಆರೋಪ ಕೇಳಿ ಬಂದಿದೆ.

ಕ್ರಿಕೆಟ್ ಆಟಗಾರರು ಇದ್ದ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿ 2 ಆ್ಯಂಬುಲೆನ್ ದ್ವಿಗಳು ನಿಂತಿದ್ದವು. ವಿಧಾನಸೌಧದ ಬಳಿ ಲಕ್ಷಾಂತರ ಜನ ಸೇರಿದರೂ ಆ್ಯಂಬುಲೆನ್ಸ್ ಅನ್ನು ನಿಯೋಜಿ ಸಿರಲಿಲ್ಲ. ನಿಯಮದ ಪ್ರಕಾರ ಜನಸಂದಣಿಯ ಆಧಾರದಲ್ಲಿ ಇಂತಿಷ್ಟು ಆ್ಯಂಬುಲೆನ್ಸ್‌ಗಳು ಎಂದು ನಿಯೋಜಿಸಲಾಗುತ್ತದೆ. ಆದರೆ, ಇಲ್ಲಿ ನಿಯೋಜಿಸದ ಬಗ್ಗೆ ಆಕ್ರೋಶಗಳು ವ್ಯಕ್ತವಾಗಿವೆ. ಇನ್ನು ತುರ್ತು ಪ್ರಥಮ ಚಿಕಿತ್ಸೆ ಕೊಡಿಸುವ ವಾಹನಗಳೇ ಇರಲಿಲ್ಲ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ. ಇನ್ನು ದುರ್ಘಟನೆ ಸಂಭವಿಸುತ್ತಿದ್ದಂತೆ ಚಿನ್ನ ಸ್ವಾಮಿ ಕ್ರೀಡಾಂಗಣದ ಪಕ್ಕದಲ್ಲಿದ್ದ ಬೌರಿಂಗ್ ಆಸ್ಪತ್ರೆ ಹಾಗೂ ವೈದೇಹಿ ಆಸ್ಪತ್ರೆಯ ಹತ್ತಾರು ಆ್ಯಂಬುಲೆನ್ಸ್‌ಗಳು ಒಂದಾದ ಮೇಲೊಂದರಂತೆ ಸ್ಟೇಡಿಯಂನತ್ತ ಧಾವಿಸಿದವು. ಆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ, ವಿಧಾನಸೌಧ, ಕಬ್ಬನ್‌ ಪಾರ್ಕ್‌, ನೃಪತುಂಗ ರಸ್ತೆ, ಎಂ.ಜಿ. ರಸ್ತೆ ಸುತ್ತಲೂ ಆ್ಯಂಬುಲೆನ್ಸ್‌ಗಳದ್ದೇ ಶಬ್ದ ಮೊಳಗಿತ್ತಿದ್ದವು. ಇದು ದುರಂತದ ಭೀಕರತೆಗೆ ಸಾಕ್ಷಿಯಾಗಿತ್ತು. ಈ ಬಗ್ಗೆ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

“ಆ್ಯಂಬುಲೆನ್ಸ್ ಇದ್ದರೆ ಬದುಕುಳಿಯುತ್ತಿದ್ದರು’: ಒಂದು ವೇಳೆ ಕಾಲ್ಕುಳಿತ ಸಂಭವಿಸುವ ಸಂದರ್ಭದಲ್ಲಿ ಆ್ಯಂಬುಲೆನ್ಸ್‌ಗಳು, ತುರ್ತು ಪ್ರಥಮ ಚಿಕಿತ್ಸೆ ಕೊಡಿಸುವ ವ್ಯವಸ್ಥೆ, ವೈದ್ಯರನ್ನು ನಿಯೋಜಿಸಿದ್ದರೆ 11 ಮಂದಿ ಪೈಕಿ ಕೆಲವರ ಪ್ರಾಣ ಉಳಿಯುತ್ತಿತ್ತು. ಗಾಯಾಳುಗಳಿಗೂ ನೆರವಾಗುತಿತ್ತು ಎಂದು ಸ್ಟೇಡಿಎಂನಲ್ಲಿ ನೆರೆದಿದ್ದ ಆರ್‌ಸಿಬಿ ಅಭಿಮಾನಿಗಳೇ ಆರೋಪಿಸಿದ್ದಾರೆ.


Share with

Leave a Reply

Your email address will not be published. Required fields are marked *