ಕಾಸರಗೋಡು: ಮಣ್ಣು ಅಗೆಯುವ ಯಂತ್ರ ಮಗುಚಿ ಬಿದ್ದು ಮಹಿಳಾ ಕಾಂಗ್ರೆಸ್ ನಾಯಕಿ ಮಿನಿಚಂದ್ರನ್ ಅವರ ಪುತ್ರ ಪ್ರೀತಂಲಾಲ್ ಚಂದ್ (22) ಸಾವಿಗೀಡಾದರು.
ಜೂ. 25ರಂದು ಬೆಳಗ್ಗೆ 10 ಗಂಟೆಗೆ ಪಡ್ಪುನಲ್ಲಿರುವ ಮನೆ ಪರಿಸರದಲ್ಲಿ ಮಣ್ಣು ಅಗೆಯುವ ಯಂತ್ರ ಕೆಲಸದಲ್ಲಿ ತೊಡಗಿದಾಗ ಮಗುಚಿ ಬಿದ್ದಿದೆ. ಯಂತ್ರದಡಿ ಸಿಲುಕಿದ ಪ್ರೀತಂಲಾಲ್ ಅವರನ್ನು ಸ್ಥಳೀಯರು ಯಂತ್ರದಡಿಯಿಂದ ಹೊರ ತೆಗೆದು ಆಸ್ಪತ್ರೆಗೆ ತಲುಪಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಬೇಡಗಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.