ಸಾಕು ಪ್ರಾಣಿಗಳು ಮನೆಗೊಂದು ಕಳೆಯನ್ನು ತರುತ್ತದೆ. ಮನೆಯವರ ಮನಸ್ಸಿನಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿರುತ್ತದೆ. ಹಾಗಾಗಿ ಸಾಕು ಪ್ರಾಣಿಗಳಿಗೆ ಹುಟ್ಟು ಹಬ್ಬ ಆಚರಿಸುವುದು, ಅವುಗಳಿಗೆ ಸುಂದರವಾದ ಬಟ್ಟೆ ತೊಡಿಸಿ ಸಂಭ್ರಮಿಸುವಂತಹ ಸುದ್ದಿಗಳನ್ನು ನಾವು ಕೇಳುತ್ತಿರುತ್ತೇವೆ. ಆದರೆ ಇಲ್ಲೊಂದು ಕುಟುಂಬವು ತಮ್ಮ ಮನೆಯ ನಾಯಿಗೆ ಸೀಮಂತ ಕಾರ್ಯಕ್ರಮವನ್ನು ನಡೆಸಿದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ.

ಸದ್ಯದಲ್ಲಿಯೇ ಮರಿ ಇಡಲಿರುವ ಪ್ರೀತಿಯ ಸಾಕು ನಾಯಿಗೆ ಮನೆಯವರೆಲ್ಲಾ ಸೇರಿಕೊಂಡು ಸೀಮಂತ ಕಾರ್ಯಕ್ರಮವನ್ನು ಮಾಡಿ ಸಂಭ್ರಮಾಚರಿಸಿಕೊಂಡಿದ್ದಾರೆ.
ನಾಯಿಗೆ ಸುಂದರವಾದ ಬಟ್ಟೆಯನ್ನು ತೊಡಿಸಿ, ಹೂ, ಆಭರಣವನ್ನು ತೊಡಿಸಿದ್ದು, ಆರತಿ ಮಾಡಿ ಅದಕ್ಕೆ ಸೀಮಂತ ಕಾರ್ಯ ಮಾಡುತ್ತಿರುವುದು ವಿಡಿಯೋದಲ್ಲಿ ಕಾಣಬಹುದು.
ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರು ಈ ವಿಡಿಯೋಗೆ ಬಹಳಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.




