
ಟಿ-ಸೀರೀಸ್‌ನ ಮಾಜಿ ನಟ, ನಿರ್ಮಾಪಕ ಕ್ರಿಶನ್ ಕುಮಾರ್ ಅವರ ಪುತ್ರಿ ತಿಶಾ ಕುಮಾರ್ ನಿಧನರಾಗಿದ್ದಾರೆ.

ಕ್ಯಾನ್ಸರ್ ವಿರುದ್ಧ ದೀರ್ಘಕಾಲದ ಹೋರಾಟದ ನಂತರ ನಿನ್ನೆ ಕೊನೆಯುಸಿರೆಳೆದಿದ್ದಾರೆ. ಕೇವಲ 21 ವರ್ಷ ವಯಸ್ಸಿನವರಾಗಿದ್ದ ತಿಶಾ, ಜರ್ಮನಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಟಿ-ಸೀರೀಸ್ ಹೇಳಿಕೆ ಬಿಡುಗಡೆ ಮಾಡಿದ್ದು, “ಇದು ಕುಟುಂಬಕ್ಕೆ ಕಷ್ಟಕರ ಸಮಯ, ಕುಟುಂಬದ ಗೌಪ್ಯತೆ ಗೌರವಿಸಿ” ಎಂದಿದೆ.
ಟಿ- ಸೀರೀಸ್ ಆಯೋಜಿಸಿದ ಕಾರ್ಯಕ್ರಮಗಳಿಗೆ ತಿಶಾ ತನ್ನ ತಂದೆ ಜೊತೆಯಲ್ಲಿ ಹೋಗುತ್ತಿದ್ದರು.




