’ದಿ ಲಯನ್ ಕಿಂಗ್’ ಚಿತ್ರದ ಮೂಲಕ ವಿಶ್ವದಾದ್ಯಂತ ಅಭಿಮಾನಿಗಳ ಮನಗೆದ್ದ ನಟಿ ಇಮಾನಿ ಸ್ಮಿತ್ (25) ತಮ್ಮ ಮನೆಯಲ್ಲೇ ಭೀಕರವಾಗಿ ಹತ್ಯೆಗೀಡಾಗಿದ್ದಾರೆ. ಕೊಲೆ ಆರೋಪದ ಮೇಲೆ ಅಮೆರಿಕದ ಪೊಲೀಸರು ಇದೀಗ ಆಕೆಯ ಪ್ರಿಯಕರ ಜೋರ್ಡಾನ್ ಡಿ. ಜಾಕ್ಸನ್ ಎಂಬಾತನನ್ನು ಬಂಧಿಸಿದ್ದಾರೆ.

ನಟಿ ಇಮಾನಿ ಅವರಿಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ. ಈ ಹತ್ಯೆಯ ಹಿಂದಿನ ನಿಖರ ಕಾರಣದ ಬಗ್ಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.




